Saturday, August 29, 2026
spot_imgspot_img
spot_imgspot_img

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ; ಬಂಧಿತರ ಸಂಖ್ಯೆ 25ಕ್ಕೆ ಏರಿಕೆ

- Advertisement -
- Advertisement -

ಬೆಂಗಳೂರು: 545 ಪಿಎಸ್‌ಐ ನೇಮಕಾತಿಯ ಪರೀಕ್ಷೆಯಲ್ಲಿನ ಅಕ್ರಮ ಬಯಲು ಮಾಡಿದ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

ಬಂಧಿತನನ್ನು ಶ್ರೀಧರ ಪವಾರ ಎಂದು ಗುರುತಿಸಲಾಗಿದ್ದು, ಈತ ಪ್ರಾಮಾಣಿಕವಾಗಿ ಪಿಎಸ್‌ಐ ಪರೀಕ್ಷೆ ಬರೆದು ಆಯ್ಕೆಯಾಗಿದ್ದ. ಅಕ್ರಮದ ಮೊದಲ ಆರೋಪಿ ಕಿಂಗ್‌ಪಿನ್‌ ಮಂಜುನಾಥ್‌ ಮೇಳಕುಂದಿಯನ್ನು ಪರಿಚಯಿಸಿದ್ದ ವಿರೇಶ್‌ನಿಗೆ ಪರಿಚಯ ಮಾಡಿಸಿದ್ದ. ನಂತ್ರ ವೀರೇಶ್‌, ಮಂಜುನಾಥ ಮೇಳಕುಂದಿ ನಡುವೆ ಡೀಲ್‌ ಕುದುರಿಸಿದ್ದ. ನೀನು ಕಡಿಮೆ ಹಣದಲ್ಲಿ ಪಿಎಸ್‌ಐ ಆಗಿ ಆಯ್ಕೆಯಾಗಿದ್ದೀಯಾ. ನನಗೆ 5 ಲಕ್ಷ ನೀಡವಂತೆ ಶ್ರೀಧರ್‌ ಪವಾರ್‌ ವೀರೇಶ್‌ ಬಳಿ ಬೇಡಿಕೆಯಿಟ್ಟದ್ದ. ಆದ್ರೆ, ಹಣ ನೀಡದಿದ್ದಕ್ಕೆ ವೀರೇಶ್‌ನ ಒಎಂಆರ್‌ ಶೀಟ್‌ ಲೀಕ್‌ ಮಾಡಿದ್ದ.

ಇನ್ನು ಕೊನೆಗೆ ಒಎಂಆರ್ ಶೀಟ್ ನಲ್ಲಿ ಕೇವಲ 21 ಪ್ರಶ್ನೆಗಳಿಗೆ ಉತ್ತರಿಸಿದ್ದ. ಒಎಂಆರ್ ಶೀಟ್ ನಲ್ಲಿ ಇದು ಸ್ಪಷ್ಟವಾಗಿ ನಮೂದನೆಯಾಗಿತ್ತು.‌ ಇದನ್ನು ಶ್ರೀಧರ ಫೋಟೋ ತೆಗದಿದ್ದಾನೆ. ತನ್ನ ಹೆಸರು ಬರೆಯಲಿಕ್ಕೆ ಬಾರದ ವಿರೇಶ ರ್‍ಯಾಂಕ್ ಬಂದಿದ್ದು, ಈ ಕುರಿತು ತನಿಖೆ ನಡೆಸುವಂತೆ ದಾಖಲೆ ಸಮೇತ ಪ್ರಕರಣ ಹೊರ ತಂದು ದೂರು ನೀಡಿದ್ದಾನೆ. ಇದೇ ದೂರು ಅಕ್ರಮ ಬಯಲಾಗಲು ಸಾಕ್ಷಿಯಾಯಿತು.

ಇದೇ ಕಾರಣದ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣ ಸಿಒಡಿಗೆ ವಹಿಸಲಾಯಿತು. ಕಳೆದ ಏ. 9ರಂದು ಕಲಬುರಗಿಯ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವಿರೇಶನನ್ನು ಮೊದಲನೆಯದಾಗಿ ಬಂಧಿಸಲಾಗಿತ್ತು.

- Advertisement -

Related news

error: Content is protected !!