Tuesday, May 21, 2024
spot_imgspot_img
spot_imgspot_img

ಪಿಸ್ತಾ ಕೇವಲ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಬಹಳ ಒಳ್ಳೆಯದು

- Advertisement -G L Acharya panikkar
- Advertisement -

ಡ್ರೈಫ್ರುಟ್ ಗಳೆಂದರೆ ಯಾರಿಗಿಷ್ಟ ಇಲ್ಲ ಸಾದ್ಯವಿಲ್ಲ. ಹೇರಳವಾಗಿ ಫೈಬರ್ ಹೊಂದಿರುವ ಇವುಗಳನ್ನು ನಿಯಮಿತವಾಗಿ ಸೇವಿಸುವುದು ಬಹಳ ಮುಖ್ಯ ಅಂತಹ ಡ್ರೈಫ್ರುಟ್ ಗಳಲ್ಲಿ ಪಿಸ್ತಾ ಕೂಡಾ ಒಂದು. ದಿನಕ್ಕೆ ಎಂಟರಿಂದ ಹತ್ತು ಪಿಸ್ತಾ ಸೇವಿಸುವುದರಿಂದ ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯದ ಆರೋಗ್ಯ ಸುಧಾರಿಸುತ್ತದೆ. ಮಧುಮೇಹ ನಿಯಂತ್ರಣಕ್ಕೂ ಸಹಕರಿಸುತ್ತದೆ. ಬೊಜ್ಜು ನಿಯಂತ್ರಣಕ್ಕೂ ನೆರವಾಗುವ ಇದು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

ಜೇನುತುಪ್ಪದಲ್ಲಿ ನೆನೆಸಿ ಅಥವಾ ಬೆರೆಸಿ ಪಿಸ್ತಾ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ದೇಹದಲ್ಲಿ ಬಿಳಿ ರಕ್ತಕಣಗಳನ್ನು ಹೆಚ್ಚಿಸುತ್ತದೆ. ಇದರಲ್ಲಿ ವಿಟಮಿನ್ ಇ ಕೂಡಾ ಹೇರಳವಾಗಿ ಇರುವುದರಿಂದ ತ್ವಚೆ ಆರೋಗ್ಯಪೂರ್ಣವಾಗಿ ಕಂಗೊಳಿಸುತ್ತದೆ.

ಹಣ್ಣುಗಳೊಂದಿಗೆ ಬೆರೆಸಿ ಅಥವಾ ಐಸ್ ಕ್ರೀಮ್ ಗೆ ಮಿಕ್ಸ್ ಮಾಡಿ ಮಕ್ಕಳಿಗೆ ಕೊಟ್ಟರೆ ಅವರೂ ಇಷ್ಟ ಪಟ್ಟು ಸವಿಯುತ್ತಾರೆ. ವಿಪರೀತ ಸೇವಿಸಿದರೆ ಮಲಬದ್ಧತೆ, ಜೀರ್ಣವಾಗದಿರುಂತಹ ಸಮಸ್ಯೆಗಳು ಕಂಡು ಬರಬಹುದು ಹಾಗೂ ನಿಯಮಿತವಾಗಿ ಸೇವಿಸುದ್ದರಿಂದ ಬಹಳ ಪ್ರಯೊಜನಕಾರಿಯಾಗಿದೆ.

- Advertisement -

Related news

error: Content is protected !!