Monday, August 10, 2026
spot_imgspot_img
spot_imgspot_img

ಬೆಳ್ಳಾರೆ: ಸಿಎಂ ಸೂಚನೆ ಮೇರೆಗೆ ನೆಟ್ಟಾರಿನತ್ತ ಸಚಿವ ಸುನೀಲ್ ಕುಮಾರ್‌..! ಬಿಜೆಪಿ ರಾಜ್ಯಾಧ್ಯಕ್ಷರೂ ಭಾಗಿಯಾಗುವ ಸಾಧ್ಯತೆ

- Advertisement -
- Advertisement -

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಅವರ ಮೃತದೇಹದ ಅಂತಿಮ ದರ್ಶನ ಪಡೆಯಲು ಸಿಎಂ ಸೂಚನೆಯ ಮೇರೆಗೆ ಸಚಿವ ಸುನೀಲ್ ಕುಮಾರ್ ದೌಡಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ. ಬಿಜೆಪಿಯ ಯಾವ ಪ್ರಮುಖ ನಾಯಕರೂ ಆಗಮಿಸಲಿಲ್ಲವೆಂಬ ಆಕ್ರೋಶ ಹಿಂದೂ ಕಾರ್ಯಕರ್ತರಲ್ಲಿದ್ದು, ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಕಿಡಿ ಕಾರಿದ್ದರು.

ಇದರ ಬೆನ್ನಲ್ಲೇ ಇದೀಗ ಇಂಧನ ಸಚಿವ ಸುನೀಲ್ ಕುಮಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸೂಚನೆಯ ಹಿನ್ನಲೆಯಲ್ಲಿ ಪ್ರವೀಣ್ ಅಂತಿಮ ದರ್ಶನಕ್ಕಾಗಿ ನೆಟ್ಟಾರ್ ಗೆ ತೆರಳುತ್ತಿದ್ದಾರೆ. ಸುನಿಲ್ ಕುಮಾರ್‍ ಅವರ ಇಂದಿನ ಎಲ್ಲ ಕಾರ್ಯಕ್ರಮಗಳು ರದ್ದುಗೊಂಡಿದ್ದು, ಮಂಗಳೂರಿನಿಂದ ನೇರವಾಗಿ ನೆಟ್ಟಾರ್ ಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ಸಚಿವರುಗಳಾದ ಸುನೀಲ್ ಕುಮಾರ್ ಹಾಗೂ ಅಂಗಾರ ಅವರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕೂಡಾ ಇದರಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.

- Advertisement -

Related news

error: Content is protected !!