Friday, June 5, 2026
spot_imgspot_img
spot_imgspot_img

ಪುತ್ತೂರು: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

- Advertisement -
- Advertisement -
vtv vitla

ಪುತ್ತೂರು: ಅಡಿಕೆ ತೆಗೆಯುತ್ತಿದ್ದ ವೇಳೆ ಅಡಿಕೆ ಮರ ಅರ್ಧದಿಂದ ತುಂಡಾದ ಪರಿಣಾಮ ವ್ಯಕ್ತಿಯೋರ್ವರು ಬಿದ್ದು ಮೃತಪಟ್ಟ ಘಟನೆ ಕೊಳ್ತಿಗೆ ಗ್ರಾಮದ ಕೊರ್ಬಂಡ್ಕದಿಂದ ವರದಿಯಾಗಿದೆ. ದೊಡ್ಡ ಮನೆ ನಿವಾಸಿ ಚಂದ್ರ ಶೇಖರ ಗೌಡ (56 ವ) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಇವರು ಇಂದು ತನ್ನ ಅಡಿಕೆ ತೋಟದಲ್ಲಿ ಅಡಿಕೆ ತೆಗೆಯಲೆಂದು ಮರ ಹತ್ತಿದ್ದರು ಈ ವೇಳೆ ಅಡಿಕೆ ಮರ ಅರ್ಧದಿಂದ ತುಂಡಾದ ಪರಿಣಾಮ ಮರ ಸಮೇತ ಚಂದ್ರ ಶೇಖರ ಗೌಡರವರು ನೆಲಕ್ಕೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

- Advertisement -

Related news

error: Content is protected !!