Saturday, May 18, 2024
spot_imgspot_img
spot_imgspot_img

ಪುತ್ತೂರು: ಅಧಿಕಾರ ದುರುಪಯೋಗ, ಮೋಸದಿಂದ ಸಾಲ ಪಡೆದು ವಂಚನೆ ಆರೋಪ; ಪಂಜಿಗುಡ್ಡೆ ಈಶ್ವರ ಭಟ್‌ ಮತ್ತು ಸಹೋದರ ಚಂದ್ರಶೇಖರ ವಿರುದ್ಧ ಪ್ರಕರಣ ದಾಖಲು

- Advertisement -G L Acharya panikkar
- Advertisement -
vtv vitla

ಪುತ್ತೂರು: ಇತರರ ಹೆಸರು ಆರ್‌ಟಿಸಿಯಲ್ಲಿದ್ದರೂ ಸಹೋದರರಿಬ್ಬರು ಸೇರಿಕೊಂಡು ಸದ್ರಿ ಆಸ್ತಿಗಳ ಆಧಾರದಲ್ಲಿ ವಂಚನೆಯಿಂದ ಸಾಲ ಪಡೆದುಕೊಂಡು ಹಣಕಾಸಿನ ಅಕ್ರಮ, ಮೋಸ, ವಂಚನೆ ಹಾಗೂ ಅಧಿಕಾರ ದುರುಪಯೋಗಪಡಿಸಿರುವುದಾಗಿ ಆರೋಪಿಸಿ ಮಹಿಳೆಯೋರ್ವರು ನೀಡಿರುವ ದೂರಿನ ಮೇರೆಗೆ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್‌ ಪಂಜಿಗುಡ್ಡೆ ಮತ್ತು ಅವರ ಸಹೋದರ ಚಂದ್ರಶೇಖರ ಎಂಬವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬನ್ನೂರು ಗ್ರಾಮದ ಶ್ರೀ ದೇವಿ ಅನಿಲಕೋಡಿ ದಿ.ಅನಂತೇಶ್ವರ ಭಟ್ ಎಂಬವರ ಮಗಳು ವಸಂತಲಕ್ಷ್ಮೀ ಯಾನೆ ವಸಂತಿ (44)ರವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ, ಪಡ್ನೂರು ಗ್ರಾಮದ ಸರ್ವೆ ನಂಬ್ರ 95/1 ,96/4, 96/30, 97/10, 113/4, 97/, 97/10, 96/30, 113/3, 96/2, 95/6, 95/5, 95/4, 96/3ಅ, 95/3 ಮತ್ತು 3/1 ಹಾಗೂ ಕಬಕ ಗ್ರಾಮದ ಸರ್ವೆ ನಂಬ್ರ: 96/20ರಲ್ಲಿ ಜಮೀನನ್ನು ಹೊಂದಿದ್ದು ಸದ್ರಿ ಜಮೀನಿನಲ್ಲಿ ನನಗೆ ಮತ್ತು ನನ್ನ ತಾಯಿ, ತಮ್ಮಂದಿರಿಗೆ 31/108 ಅಂಶದ ಹಕ್ಕು ಇರುವುದಾಗಿ ಎಡಿಷನಲ್‌ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯದಲ್ಲಿ ತೀರ್ಮಾನ ಆಗಿರುತ್ತದೆ. ಈ ತೀರ್ಪಿನ ವಿರುದ್ಧ ಆರೋಪಿ ಈಶ್ವರ ಭಟ್ ಪಂಜಿಗುಡ್ಡೆ 5ನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿಯು ವಜಾಗೊಂಡಿರುತ್ತದೆ. ಸದ್ರಿ ಡಿಕ್ರಿಯ ಪ್ರಕಾರ ಆರ್‌ಟಿಸಿಯಲ್ಲಿ ನನ್ನ ಮತ್ತು ತಮ್ಮಂದಿರು, ತಾಯಿಯ ಹೆಸರು ನಮೂದು ಇರುತ್ತದೆ.

2022ನೇ ಮೇ ತಿಂಗಳಿನಲ್ಲಿ ಜಮೀನಿನ ದಾಖಲಾತಿಗಳನ್ನು ತಾನು ಪರಿಶೀಲಿಸಿದಾಗ ಬನ್ನೂರು ರೈತರ ಸೇವಾ ಸಹಕಾರಿ ಸಂಘ ಮತ್ತು ಕಾರ್ಪೋರೇಶನ್ ಬ್ಯಾಂಕ್‌ ಬೊಳ್ವಾರ್‌‌ ಶಾಖೆ (ಈಗಿನ ಯೂನಿಯನ್ ಬ್ಯಾಂಕ್‌)ಯಲ್ಲಿ ಸದ್ರಿ ಆಸ್ತಿಗಳ ಆಧಾರದಲ್ಲಿ ಆರೋಪಿಗಳು ತಮ್ಮ ಹೆಸರಿನಲ್ಲಿ ಸಾಲಗಳನ್ನು ಪಡೆದುಕೊಂಡಿರುವುದು ಕಂಡು ಬಂದಿರುತ್ತದೆ. ಪ್ರಸ್ತುತ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷನಾಗಿದ್ದು, ಈ ಹಿಂದೆ ನಿರ್ದೇಶಕನಾಗಿ ಹಾಗೂ ಉಪಾಧ್ಯಕ್ಷನಾಗಿ ಹಲವಾರು ವರ್ಷಗಳಿಂದ ಇದ್ದ ಈಶ್ವರ ಭಟ್ ತನ್ನ ಪ್ರಭಾವ ಬಳಸಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮೋಸ ಹಾಗೂ ವಂಚನೆಯಿಂದ ಸಾಲ ಪಡೆದುಕೊಂಡಿರುವುದಾಗಿದೆ. ಈ ಕುರಿತು ತಾನು ವಕೀಲರ ಮೂಲಕ ಈ ಹಿಂದೆ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಗೋಪಾಲಕೃಷ್ಣ ಭಟ್ ಮತ್ತು ಕಾರ್ಪೋರೇಶನ್ ಬ್ಯಾಂಕ್‌ ಬೊಳ್ವಾರ್‌ ಶಾಖೆ ಇದರ ವ್ಯವಸ್ಥಾಪಕರಾಗಿದ್ದ ಭವೇಶ್‌ರವರಿಗೆ ಪತ್ರ ವ್ಯವಹಾರ ಮಾಡಿದಾಗ ಅವರುಗಳೂ ಸತ್ಯವನ್ನು ಮರೆಮಾಚಿರುತ್ತಾರೆ. ಇವರೆಲ್ಲರೂ ಹಣಕಾಸಿನ ಅಕ್ರಮ, ಮೋಸ, ವಂಚನೆ ಹಾಗೂ ಅಧಿಕಾರ ದುರುಪಯೋಗಪಡಿಸಿದ ಅಪರಾಧ ಎಸಗಿರುತ್ತಾರೆ ಎಂದು ವಸಂತ ಲಕ್ಷ್ಮೀ ಯಾನೆ ವಸಂತಿಯವರು ಪುತ್ತೂರು ನಗರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಅವರು ನೀಡಿರುವ ದೂರಿನ ಮೇರೆಗೆ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಅವರ ಸಹೋದರ ಚಂದ್ರಶೇಖರ ಎಂಬವರ ವಿರುದ್ಧ ಪೊಲೀಸರು ಕಲಂ 217,417,419,420,463,464,465,467,468,469,471 23 34 … ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!