Tuesday, June 9, 2026
spot_imgspot_img
spot_imgspot_img

ಕಡಬ : ರಬ್ಬರ್‌ ಟ್ಯಾಪಿಂಗ್‌ ಕೆಲಸ ಮಾಡುತ್ತಿದ್ದ ಕಾರ್ಮಿಕ ಮೃತ್ಯು

- Advertisement -
- Advertisement -
This image has an empty alt attribute; its file name is VC_PUC_-1-819x1024.jpg

ಕಡಬ : ರಬ್ಬರ್‌ ಟ್ಯಾಪಿಂಗ್‌ ಕೆಲಸ ಮಾಡುತ್ತಿದ್ದ ಕಾರ್ಮಿಕ ಮೃತಪಟ್ಟಿರುವ ಘಟನೆ ಕಡಬ ತಾಲೂಕು ಕುಂತೂರು ಗ್ರಾಮದಲ್ಲಿ ನಡೆದಿದೆ.

ಕೃಷ್ಣ ಕುಮಾರ್ ಎಂಬವರ ದೂರಿನಂತೆ, ಕೃಷ್ಣ ಕುಮಾರ್ ರವರ ಪತ್ನಿಯ ತಮ್ಮನಾದ ಕೋಡಿಂಬಾಳ ಗ್ರಾಮ ,ಕಡಬ ನಿವಾಸಿ ಶರತ್‌ (29) ಎಂಬಾತನು, 6 ತಿಂಗಳಿನಿಂದ ಕಡಬ ತಾಲೂಕು ಕುಂತೂರು ಗ್ರಾಮದ ಉದಯಶಂಕರ್‌ ಭಟ್ ಎಂಬವರ ಮನೆಗೆ ರಬ್ಬರ್‌ ಟ್ಯಾಪಿಂಗ್‌ ಕೆಲಸಕ್ಕೆ ಹೋಗುತ್ತಿದ್ದು, ದಿನಾಂಕ;17.05.2024 ರಂದು ಸಂಜೆ, ಉದಯಶಂಕರ್‌ ಭಟ್‌ ರವರ ಜಾಗದಲ್ಲಿರುವ ಶೆಡ್‌ನಲ್ಲಿ ಮೃತಪಟ್ಟಿರುವುದಾಗಿ ಉದಯಶಂಕರ್‌ ಭಟ್‌ ರವರು ತಿಳಿಸಿದ್ದು, ಕೃಷ್ಣ ಕುಮಾರ್ ರವರು ಸ್ಥಳಕ್ಕೆ ಬಂದು ನೋಡಿದಾಗ ಶರತ್‌ ಮೃತಪಟ್ಟಿದ್ದಾರೆ. ಮೃತನ ಸಾವಿಗೆ ಕಾರಣ ತಿಳಿದಿರುವುದಿಲ್ಲ. ಮೃತನು ಕುಡಿತದ ಅಬ್ಯಾಸ ಹೊಂದಿದವನಾಗಿದ್ದು, ಯಾವುದೋ ಕಾರಣದಿಂದ ಬಿದ್ದು ಮೃತಪಟ್ಟಿರಬಹುದಾಗಿ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸು ಠಾಣೆಯಲ್ಲಿ ಯು.ಡಿ.ಆರ್‌ ನಂ: 15/2024 ಕಲಂ:174(3)&(iv) CrPC ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

- Advertisement -

Related news

error: Content is protected !!