Monday, June 15, 2026
spot_imgspot_img
spot_imgspot_img

ಪುತ್ತೂರು: ಅನಾರೋಗ್ಯದಿಂದ 9ನೇ ತರಗತಿ ವಿದ್ಯಾರ್ಥಿನಿ ಮೃತ್ಯು

- Advertisement -
- Advertisement -

ಪುತ್ತೂರು: ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಅನುಶ್ರೀ ಅನಾರೊಗ್ಯದಿಂದಾಗಿ ನಿಧನರಾಗಿದ್ದಾರೆ.

ಕಾವು ನಿವಾಸಿ ಧರ್ಮಲಿಂಗಮ್ ತಾಯಿ ತಮಿಳ್ ಸೆಲ್ವಿ ಎಂಬವರ ಪುತ್ರಿ ಅನುಶ್ರೀ ನಿಧನರಾದವರು.

ಅನುಶ್ರೀ ಅವರಿಗೆ ಕಳೆದ ಮೂರು ದಿನಗಳಿಂದ ಜ್ವರ ಕಾಣಿಸಿದ್ದು, ಪುತ್ತೂರು ಆಸ್ಪತ್ರೆಯಿಂದ ಔಷಧಿ ಪಡೆದಿದ್ದರು. ಡಿ.15ರಂದು ರಾತ್ರಿ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಪುತ್ತೂರು ಆಸ್ಪತ್ರೆಗೆ ಕರೆ ತರುವಾಗ ಆಕೆ ಮೃತಪಟ್ಟಿದ್ದಾರೆ.

ಅನುಶ್ರೀ ಅವರ ನಿಧನದ ಹಿನ್ನಲೆಯಲ್ಲಿ ಡಿ.16ರಂದು ಬೆಳಿಗ್ಗೆ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ಮೃತ ಅನುಶ್ರೀ ಅವರಿಗೆ ಸಂತಾಪ ಸೂಚಿಸಿ ನುಡಿನಮನ ಸಲ್ಲಿಸಲಾಯಿತು.

- Advertisement -

Related news

error: Content is protected !!