Thursday, April 25, 2024
spot_imgspot_img
spot_imgspot_img

ಪುತ್ತೂರು: ಅ. 26 ರಂದು ರೈ ಎಸ್ಟೇಟ್‌ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್‌ (ರಿ) ಜನಸೇವಾ ಕೇಂದ್ರ ಪುತ್ತೂರು ಇದರ ದಶಸಂಭ್ರಮ; ಫಲಾನುಭವಿಗಳ ಸಮಾವೇಶ ಮತ್ತು ವಸ್ತ್ರ ವಿತರಣೆ

- Advertisement -G L Acharya panikkar
- Advertisement -

ರೈ ಎಸ್ಟೇಟ್ ಎಜ್ಯುಕೇಶನ್ & ಚಾರಿಟೇಬಲ್ ಟ್ರಸ್ಟ್ (ರಿ.) ಇದರ ವತಿಯಿಂದ ದೀಪಾವಳಿಯ ಪ್ರಯುಕ್ತ ಟ್ರಸ್ಟ್‌ನ ‘ದಶಸಂಭ್ರಮ’ದ ಅಂಗವಾಗಿ ಟ್ರಸ್ಟ್‌ನ ಫಲಾನುಭವಿಗಳ ಸಮಾವೇಶ ಮತ್ತು ವಸ್ತ ವಿತರಣೆ ದಿನಾಂಕ 26-10-2022ನೇ ಬುಧವಾರ ಪ್ರತ್ತೂರು ಕಿಲ್ಲೆ ಮೈದಾನ (ಕೋರ್ಟು ಮೈದಾನ)ದಲ್ಲಿ ನಡೆಯಲಿದೆ.

ದೀಪ ಪ್ರಜ್ವಲನೆಯನ್ನು ಗಿರಿಜಾ ಎಸ್. ರೈ, ರೈ ಎಸ್ಟೇಟ್ ಕೋಡಿಂಬಾಡಿ ಇವರು ನೆರವೇರಿಸಲಿದ್ದಾರೆ. ನಂತರ ವಿಠಲ ನಾಯಕ್ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ ಗಂಟೆ 11.00 ರಿಂದ ಸರ್ವಧರ್ಮ ಸಭಾ ಕಾರ್ಯಕ್ರಮ ನಡೆಯಲಿದ್ದು ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರು ಇವರು ಆಶೀರ್ವಚನ ನೀಡಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶೋಕ್ ಕುಮಾರ್ ರೈ ಕ.ಯಸ್, ಉದ್ಯಮಿಗಳು, ಪ್ರದರ್ಶಕರು, ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ವಹಿಸಿಕೊಳ್ಳಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಲೋಕಸಭಾ ಸದಸ್ಯ ಡಿ.ವಿ. ಸದಾನಂದ ಗೌಡ, ಅಕ್ಷಯ ಕಾಲೇಜು, ಪುತ್ತೂರು ಇದರ ಸಂಚಾಲಕ ಜಯಂತ ನಡುಬೈಲು, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಮಾಜಿ ಸಚಿವ ಬಿ. ರಮಾನಾಥ ರೈ, ಮ್ಯಾದೆ ದೇವುಸ್ ಚರ್ಚ್‌‌ನ ಧರ್ಮಗುರು ವಿ.ರೇ, ಫಾದರ್ ಲಾರೆನ್ಸ್ ಮಸ್ಕರೇನ್ಹಸ್, ಧಾರ್ಮಿಕ ಮುಖಂಡ ಜ| ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ ಸೇರಿದಂತೆ ಮೊದಲಾದವರು ಆಗಮಿಸಲಿದ್ದಾರೆ.

ಈ ವೇಳೆ ಬಡ ಸ್ವಾವಲಂಬಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ನಂತರ ಶ್ರೀ ಶಾರದಾ ಅಂಧರ ಗೀತಗಾಯನ ಕಲಾ ಸಂಘ (ರಿ) ಶೃಂಗೇರಿ ಇವರಿಂದ ಗೀತಾಗಾಯನ ಕಾರ್ಯಕ್ರಮ ನಡೆಯಲಿದೆ.

ದೀಪಾವಳಿ ಪ್ರಯುಕ್ತ ಬೆಳಿಗ್ಗೆ ಗಂಟೆ 9.00ರಿಂದ ಗೂಡುದೀಪ ಸ್ಪರ್ಧೆಯನ್ನು ಸ್ಥಳದಲ್ಲಿ ಏರ್ಪಡಿಸಲಾಗಿದೆ. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಗೂಡುದೀಪವನ್ನು ಮನೆಯಲ್ಲೇ ತಯಾರಿಸಿ ಸಭಾಂಗಣದಲ್ಲಿ ಜೋಡಿಸುವುದು. ಮಾಹಿತಿಗಾಗಿ 8496006816, 9901347446

ಸಾಮೂಹಿಕ ಸಹಭೋಜನ ಮತ್ತು ಮಾತೆಯರಿಗೆ ಸೀರೆ ಹಾಗೂ ಪುರುಷರಿಗೆ, ಮಕ್ಕಳಿಗೆ ವಸ್ತ್ರ ವಿತರಣೆ ಮಾಡಲಾಗುತ್ತದೆ.

- Advertisement -

Related news

error: Content is protected !!