Wednesday, July 29, 2026
spot_imgspot_img
spot_imgspot_img

ಪುತ್ತೂರು: ಆಲ್ಟೋ ಕಾರು ಮತ್ತು ಆಟೋ ರಿಕ್ಷಾ ನಡುವೆ ಅಪಘಾತ; ಇಬ್ಬರಿಗೆ ಗಾಯ

- Advertisement -
- Advertisement -

ಪುತ್ತೂರು: ಇಲ್ಲಿನ ನೆಕ್ಕಿಲಾಡಿ ಎಂಬಲ್ಲಿ ಆಲ್ಟೋ ಕಾರು ಮತ್ತು ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿ, ಆಟೋ ರಿಕ್ಷಾ ರಸ್ತೆ ಪಕ್ಕದಲ್ಲಿನ ತೋಟಕ್ಕೆ ಪಲ್ಟಿಯಾದ ಘಟನೆ ಜ.28 ರಂದು ನಡೆದಿದೆ. ಗಾಯಗೊಂಡ ಆಟೋ ಚಾಲಕನನ್ನು ಕಲಂದರ್ ಶಾಫಿ ಎನ್ನಲಾಗಿದೆ.

ಉಪ್ಪಿನಂಗಡಿ ಕಡೆ ಹೋಗುತ್ತಿದ್ದ ಆಲ್ಟೋ ಕಾರು ಮತ್ತು ಪುತ್ತೂರು ಕಡೆ ಬರುತ್ತಿದ್ದ ಆಟೋ ರಿಕ್ಷಾ ನಡುವೆ ನೆಕ್ಕಿಲಾಡಿಯಲ್ಲಿ ಅಪಘಾತ ಸಂಭವಿಸಿದೆ.

ಅಪಘಾತದ ರಭಸಕ್ಕೆ ಆಟೋ ರಿಕ್ಷಾ ರಸ್ತೆ ಪಕ್ಕದಲ್ಲಿರುವ ತೋಟಕ್ಕೆ ಪಲ್ಟಿಯಾಗಿದ್ದು, ಆಟೋ ಚಾಲಕ ಮತ್ತು ಪ್ರಯಾಣಿಕ ಗಾಯಗೊಂಡಿದ್ದಾರೆ. ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಅಪಘಾತದಿಂದಾಗಿ ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

- Advertisement -

Related news

error: Content is protected !!