Wednesday, May 15, 2024
spot_imgspot_img
spot_imgspot_img

ಪುತ್ತೂರು: ಕಾಂಪ್ಕೋ ಸಂಸ್ಥೆಯ ಸೆಕ್ಯೂರಿಟಿ ಗಾರ್ಡ್‌‌ನಿಂದ ಮಾನಭಂಗಕ್ಕೆ ಯತ್ನ; ಆರೋಪಿ ಅರೆಸ್ಟ್

- Advertisement -G L Acharya panikkar
- Advertisement -

ಪುತ್ತೂರು: ಸೆಕ್ಯೂರಿಟಿ ಗಾರ್ಡ್‌ ಒಬ್ಬ ಸಹ ಉದ್ಯೋಗಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ನಡೆದಿದ್ದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಪುತ್ತೂರಿನ ಮಹಿಳೆಯೋರ್ವರು CAMPCO ಸಂಸ್ಥೆಯಲ್ಲಿ ಸುಮಾರು 5 ತಿಂಗಳಿನಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದು, ಅದೇ ಸಂಸ್ಥೆಯಲ್ಲಿ ವಿದೀಪ್‌ಕುಮಾರ್ ಎಂಬವನು ಕೂಡಾ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದನು. ಈತ ವರ್ತಿಸುತ್ತಿದ್ದ ರೀತಿ ಇಷ್ಟವಾಗದ ಕಾರಣ ಮಹಿಳೆ ಆತನೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ.

ನಿನ್ನೆ (ಜುಲೈ ೧೬ ರಂದು) ಕೆಲಸ ಮುಗಿಸಿ ಬಸ್‌ನಲ್ಲಿ ಬಂದು ತನ್ನ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಮೋಟಾರ್ ಸೈಕಲೊಂದರಲ್ಲಿ ಬಂದ ಕಾಮುಕ ವಿದೀಪ್ ಕುಮಾರ್‌ ಮಹಿಳೆಯನ್ನು ಮುಂದಕ್ಕೆ ಹೋಗದಂತೆ ತಡೆದು ನಿಲಿಸಿ, “ ನನಗೆ ನೀನು ಬೇಕು , ನಾನು ನಿನಗೋಸ್ಕರ ಯಾರನ್ನು ಬೇಕಾದರೂ ಬಿಟ್ಟು ಬಿಡುತ್ತೇನೆ, ನೀನು ನನ್ನ ಜೊತೆ ಬರಬೇಕು” ಎಂಬುದಾಗಿ ಹೇಳಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಈ ವೇಳೆ ಸ್ಥಳಕ್ಕೆ ಜನರು ಬರುತ್ತಿರುವುದನ್ನು ನೋಡಿದ ವಿದೀಪ್‌ ಅಲ್ಲಿಂದ ಕಾಲ್ಕಿತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈತ ವಿರುದ್ಧ ಸಾರ್ವಜನಿಕ ವಲಯದಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ. ಈತ ಕಂಡಕಂಡವರನ್ನು ಚುಡಾಯಿಸುವುದು. ಮಹಿಳೆಯರಿಗೆ ಕಿರುಕುಳ ಕೊಡುತ್ತಾನೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ. ಅಷ್ಟು ಮಾತ್ರವಲ್ಲದೆ ಇಂತಹ ಕೃತ್ಯಗಳಲ್ಲಿ ಈ ಹಿಂದೆಯೂ ತೊಡಗಿಸಿ ಪೊಲೀಸರ ಅತಿಥಿಯಾಗಿದ್ದ ಎಂದು ಅಲ್ಲಿನ ಸ್ಥಳೀಯರು ತಿಳಿಸಿದ್ದಾರೆ.

- Advertisement -

Related news

error: Content is protected !!