- Advertisement -
- Advertisement -


ಪುತ್ತೂರು: ಕೆಲಸದ ಆಮಿಷವೊಡ್ಡಿ ಯುವತಿಯನ್ನು ಕರೆಸಿ ಆಕೆಯ ಮೇಲೆ ಅತ್ಯಾಚಾರಗೈದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಬನ್ನೂರು ಗ್ರಾಮದ ಬನ್ನೂರುಬೈಲು ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಮಾ.13ರಂದು ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ಕು ಜನರನ್ನು ಬಂಧಿಸಿದ್ದರು.
ಸದ್ರಿ ಮೊಕದ್ದಮೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಾದ ನಂದಕುಮಾರ್ ಮತ್ತು ಲಲಿತ ಎಂಬವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳ ಪರವಾಗಿ ವಿಟ್ಲ ಪ್ರಮಾ ಅಸೋಸಿಯೇಟ್ಸ್‌ನ ವಕೀಲರಾದ ಮನೋಜ್ ಕುಮಾರ್ ಯು., ಪ್ರಶಾಂತ್ ಪೂಜಾರಿ.ಕೆ, ವೆಂಕಟೇಶ್ ಸಿ.ಎನ್., ಹಾಗೂ ರಂಜಿತ್ ಪೂಜಾರಿ ಕೆ.ರವರು ವಾದಿಸಿದ್ದಾರೆ
- Advertisement -








