Thursday, April 18, 2024
spot_imgspot_img
spot_imgspot_img

ಪುತ್ತೂರು: ಗಾನಸಿರಿಯಿಂದ ಮಾ. 13 ರಂದು ಸಾಯಂಕಾಲ 3.30 ನಟರಾಜ ವೇದಿಕೆಯಲ್ಲಿ ತ್ರಿವಿಧ ಸಂಗೀತ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಭಿನ್ನ ಸಂಗೀತ ಕಾರ್ಯಕ್ರಮಗಳ ಸಂಯೋಜನೆಯಿಂದ ಮನೆ ಮಾತಾಗಿರುವ ಡಾ.ಕಿರಣ್ ಕುಮಾರ್ ಸಾರಥ್ಯದ ಗಾನಸಿರಿ ಕಲಾಕೇಂದ್ರ (ರಿ) ಪುತ್ತೂರು ಸಂಸ್ಥೆಯಿಂದ ಒಂದೇ ವೇದಿಕೆಯಲ್ಲಿ 3 ವಿಭಿನ್ನ ಸಂಗೀತ ಕಾರ್ಯಕ್ರಮಗಳ ಪ್ರಸ್ತುತಿ ತ್ರಿವಿಧ ಸಂಗೀತ ಕಾರ್ಯಕ್ರಮ ಆದಿತ್ಯವಾರ ದಿನಾಂಕ ಮಾರ್ಚ್ 13 ರಂದು, ಸಾಯಂಕಾಲ 3.30 ರಿಂದ 7.30 ರವರೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಗಾನಸಿರಿಯ ವಿಟ್ಲ ಶಾಖೆಯ ವಿದ್ಯಾರ್ಥಿಗಳಿಂದ ಗೀತ ಮಾಧುರ್ಯ, ಗಾನಸಿರಿಯ ವಿವಿಧ ಶಾಖೆಗಳಿಂದ ಆಯ್ದ ಉದಯೋನ್ಮುಖ ಹಾಡುಹಕ್ಕಿಗಳಿಗೆ ಹಾಡು ಕೋಗಿಲೆ ಹಾಡು ಗಾಯನ ಸ್ಪರ್ಧೆ ಮತ್ತು ಗಾನಸಿರಿ ಪುತ್ತೂರು ಶಾಖೆಯ ಮಕ್ಕಳ ಭಜನಾ ತಂಡದ ಲೋಕಾರ್ಪಣೆ ಹಾಗೂ ತಂಡದ ಪ್ರಥಮ ಭಜನಾ ಕಾರ್ಯಕ್ರಮ. ಇವಿಷ್ಟು ಸಂಗೀತ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ನೋಡಿ ಆಸ್ವಾದಿಸುವ ಅವಕಾಶ ಕಲಾಭಿಮಾನಿಗಳಿಗೆ ಲಭ್ಯವಾಗಲಿದ್ದು, ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ. ಕಾರ್ಯಕ್ರಮವನ್ನು ಶ್ರೀ ಉಮಾಮಹೇಶ್ವರ ಸಂಗೀತ ಕಲಾ ಶಾಲೆಯ ವಿದ್ಯಾ ಈಶ್ವರಚಂದ್ರ ಅವರು ಉದ್ಘಾಟಿಸಲಿದ್ದಾರೆ.

ನಾಡಿನ ಪ್ರಖ್ಯಾತ ಕಲಾವಿದರಾದ ಉಡುಪಿಯ ಅರುಣ್ ರಾಯ್, ವಾಮನ್ ಬೈಲೂರ್ ಕಾರ್ಕಳ, ವೀಕ್ಷಿತ್ ಕೊಡಂಚ ಉಡುಪಿ ರವರು ಕಾರ್ಯಕ್ರಮದಲ್ಲಿ ತಮ್ಮ ಕಲಾ ಪ್ರೌಢಿಮೆಯನ್ನು ಮೆರೆಯಲಿದ್ದಾರೆ. ಗಾನಸಿರಿಯ ರೂವಾರಿ ಡಾ.ಕಿರಣ್ ಕುಮಾರ್ ಗಾನಸಿರಿ ಮತ್ತು ಸಂಸ್ಥೆಯ ಸುಪ್ರಸಿದ್ಧ ಗಾಯಕಿ & ಸಂಸ್ಥೆಯ ಸಹಶಿಕ್ಷಕಿ ಶ್ರೀಲಕ್ಷ್ಮಿ ಎಸ್ ಪುತ್ತೂರು ಮತ್ತು ತಂಡದವರ ಗಾಯನವೂ ಇದ್ದು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!