Thursday, June 4, 2026
spot_imgspot_img
spot_imgspot_img

ಪುತ್ತೂರು: ಜಿ. ಎಲ್. ಆಚಾರ್ಯ ಸಂಸ್ಥೆಯ ನಿರ್ದೇಶಕ ಜಿ.ಎಲ್.ಬಲರಾಮ್ ಆಚಾರ್ಯ ಅವರಿಗೆ “ವಿಜಯರತ್ನ-2022” ಪ್ರಶಸ್ತಿ – ಶಾಸಕ ಸಂಜೀವ ಮಠಂದೂರು ಮತ್ತು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರಿಂದ ಅಭಿನಂದನೆ

- Advertisement -
- Advertisement -
vtv vitla

ಜಿ. ಎಲ್. ಆಚಾರ್ಯ ಸಂಸ್ಥೆಯ ನಿರ್ದೇಶಕ ಜಿ.ಎಲ್.ಬಲರಾಮ್ ಆಚಾರ್ಯರವರು “ವಿಜಯರತ್ನ-2022” ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಹಿನ್ನಲೆ ಅವರನ್ನು ಭೇಟಿ ಮಾಡಿದ ಶಾಸಕ ಸಂಜೀವ ಮಠಂದೂರು ಹಾಗೂ ಮಾಜಿ ಶಾಸಕಿ ಟಿ ಶಕುಂತಲಾ ಶೆಟ್ಟಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಹಿರಿಯರ ಕಾಲದಿಂದಲೂ ಸ್ವರ್ಣೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಬಲರಾಮ ಆಚಾರ್ಯ ಅವರು ಪುತ್ತೂರಿನಲ್ಲಿ ತನ್ನದೇ ಆದ ಛಾಪು ಮೂಡಿಸಿ, ಶಿಕ್ಷಣ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ. ಪುತ್ತೂರಿನ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದ್ದು ರಾಜ್ಯದ ವಿವಿಧ ಭಾಗದಲ್ಲಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಇದರಿಂದ ಯುವಕರಿಗೆ ಉದ್ಯೋಗ ಲಭಿಸುತ್ತಿದೆ. ಇಂತಹ ಕೊಡುಗೈ ದಾನಿ, ಸ್ವರ್ಣೋದ್ಯಮಿ ವಿಜಯರತ್ನ ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಇವರಿಗೆ ಇನ್ನಷ್ಟು ಪ್ರಶಸ್ತಿ ಬರಲಿ, ಪುತ್ತೂರಿನ ಜನರ ಸೇವೆ ಮಾಡುವಂತಾಗಲಿ ಎಂದು ಶಾಸಕ ಸಂಜೀವ ಮಠಂದೂರು ಶುಭ ಹಾರೈಸಿದರು.

ಶಕುಂತಲಾ ಶೆಟ್ಟಿ ಅವರು ಅಭಿನಂದನೆ ಸಲ್ಲಿಸಿದರು. ಜಿ.ಎಲ್.ಬಲರಾಮ್ ಆಚಾರ್ಯರವರ ಸ್ವರ್ಣೋದ್ಯಮ ಕ್ಷೇತ್ರದದಲ್ಲಿ ಸಾಧನೆ ಮಾಡಿದ್ದಾರೆ. ಯುವಕರಿಗೆ ಉದ್ಯೋಗ, ಸಮಾಜಸ ಸೇವೆ, ಎಲ್ಲರಿಂದ ಅತ್ಯಂತ ಪ್ರೀತಿ ಗಳಿಸಿಕೊಂಡವರು.ಇಂದು ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿದೆ. ‌ಇದರಿಂದ ಪ್ರಶಸ್ತಿಗೂ ಗೌರವ ಸಿಗುತ್ತದೆ. ಇವರ ಸೇವೆ ಹೀಗೆ ಮುಂದುವರಿಯಲಿ ಎಂದು ಶುಭಹಾರೈಸಿದರು.

- Advertisement -

Related news

error: Content is protected !!