Friday, April 19, 2024
spot_imgspot_img
spot_imgspot_img

ಪುತ್ತೂರು: ಜು.14ರಂದು ‘ಮುತ್ತಿನ ನಗರಿಯ ಹಿಂದು ಹೃದಯ ಸಾಮ್ರಾಟ್’ ಡಾ.ಎಂ.ಕೆ.ಪ್ರಸಾದ್‌ ಅಭಿನಂದನಾ ಕಾರ್ಯಕ್ರಮ; ಹಲವು ಗಣ್ಯರು ಭಾಗಿ

- Advertisement -G L Acharya panikkar
- Advertisement -
vtv vitla

ಪುತ್ತೂರು: ಡಾ.ಎಂ.ಕೆ.ಪ್ರಸಾದ್‌ ಅಭಿನಂದನಾ ಸಮಿತಿಯಿಂದ ಜು.14ರಂದು ಸಾಲ್ಮರ ಕೊಟೇಚಾ ಹಾಲ್‌ನಲ್ಲಿ ನಡೆಯಲಿರುವ ‘ಮುತ್ತಿನ ನಗರಿಯ ಹಿಂದು ಹೃದಯ ಸಾಮ್ರಾಟ್’ ಡಾ.ಎಂ.ಕೆ.ಪ್ರಸಾದ್‌ ಅಭಿವಂದನಾ, ನಾಗರಿಕ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಕರ್ನಾಟಕ ಭಾರತೀಯ ವೈದ್ಯಕೀಯ ಸಂಘದ ಪ್ರತಿಷ್ಠಿತ ಕೆ.ಎಸ್‌.ಇ ಡಾಕ್ಟರ್‍ಸ್‌ ಡೇ ಪ್ರಶಸ್ತಿ ಪುರಸ್ಕೃತರಾದ ಡಾ.ಎಂ.ಕೆ.ಪ್ರಸಾದ್ ಅವರು ಬಡವರ ಪಾಲಿನ ದೇವರು, ಹಿಂದು ಸಮಾಜಕ್ಕೆ ಅವರ ಕೊಡುಗೆ ಅಪಾರ ಇಂತಹ ಸಂದರ್ಭದಲ್ಲಿ ಅವರ ಅಭಿನಂದನಾ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ನಡೆಯಬೇಕೆಂದು ಸಭೆಯಲ್ಲಿ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮಕ್ಕೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಸಂಸದ ನಳಿನ್‌ ಕುಮಾರ್‍ ಕಟೀಲ್‌, ಮೀನುಗಾರಿಕೆ ಮತ್ತು ಬಂದರು ಒಳನಾಡು ಸಚಿವ ಎಸ್. ಅಂಗಾರ, ಶಾಸಕ ಸಂಜೀವ ಮಠಂದೂರು, ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್‌ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಡಾ. ಸುರೇಶ್ ಪುತ್ತೂರಾಯ, ಹೃದ್ರೋಗ ತಜ್ಞರು, ಮಹಾವೀರ ಆಸ್ಪತ್ರೆ ಪುತ್ತೂರು,ಅಧ್ಯಕ್ಷರು ಡಾ. ಎಮ್.ಕೆ. ಪ್ರಸಾದ್ ಅಭಿನಂದನಾ ವೇದಿಕೆ ಪುತ್ತೂರು ಇವರು ವಹಿಸಲಿದ್ದಾರೆ. ಅಭಿನಂದನಾ ಭಾಷಣವನ್ನು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿ ಮಾಡಲಿದ್ದಾರೆ.

ಗೌರವ ಉಪಸ್ಥಿತಿ

ರಾಧಾಕೃಷ್ಣ ಅಡ್ಯಂತಾಯ, ಪ್ರಾಂತ ಪ್ರಶಿಕ್ಷಣ ಪ್ರಮುಖ ಹಿಂದು ಜಾಗರಣ ವೇದಿಕೆ ಕರ್ನಾಟಕ, ಪ್ರೊ. ಎಂ.ಬಿ. ಪುರಾಣಿಕ್, ಕಾರ್ಯಾಧ್ಯಕ್ಷರು, ವಿಶ್ವಹಿಂದೂ ಪರಿಷತ್‌ ಕರ್ನಾಟಕ ದಕ್ಷಿಣ ಪ್ರಾಂತ, ಡಾ| ಗೌರಿ ಪೈ, ಹಿರಿಯ ವೈದ್ಯರು ಮತ್ತು ಸ್ಥಾಪಕಾಧ್ಯಕ್ಷರು ಆನಂದಾಶ್ರಮ ಸೇವಾ ಟ್ರಸ್ಟ್ರಿ, ಪುತ್ತೂರು, ಪ್ರವೀಣ್ ಕುಮಾರ್, ಯೋಜನಾ ನಿರ್ದೇಶಕರು, ಶ್ರೀ ಕ್ಷೇ.ಧ.ಗ್ರಾ ಯೋಜನೆ (ರಿ.) ಪುತ್ತೂರು, ಶಶಾಂಕ್‌ ಜೆ. ಕೊಟೇಚಾ, ಅಧ್ಯಕ್ಷರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ,ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು ಇವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಡಾ. ಎಂ.ಕೆ. ಪ್ರಸಾದ್ ಇವರಿಗೆ ಹಾರಾರ್ಪಣೆ ಮತ್ತು ಸನ್ಮಾನಿಸಲು ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!