Saturday, May 18, 2024
spot_imgspot_img
spot_imgspot_img

ಪುತ್ತೂರು: (ಡಿ. 28 – 29) ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಉತ್ಸವ

- Advertisement -G L Acharya panikkar
- Advertisement -
vtv vitla

ಪುತ್ತೂರು: ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಉತ್ಸವವು ಡಿ. 28 ಮತ್ತು 29 ರಂದು ನಡೆಯಲಿದೆ.

ದಿನಾಂಕ 17-12-2022ನೇ ಶನಿವಾರದಿಂದ ದಿನಾಂಕ 14-01-2023ರವರೆಗೆ ಪ್ರತಿ ದಿನ ಬೆಳಿಗ್ಗೆ ಗಂಟೆ 5-00ಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಧನು ಪೂಜೆ ಜರಗಲಿರುವುದು.

ದಿನಾಂಕ 23-12-2022ನೇ ಶುಕ್ರವಾರ 9 ಗಂಟೆಗೆ ಚಪ್ಪರ ಮುಹೂರ್ತ ನಡೆಯಲಿದೆ.

ಡಿ. 27 ನೇ ಮಂಗಳವಾರ ಸಂಜೆ ಗಂಟೆ 4 ಕ್ಕೆ ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ದೇವಸ್ಥಾನ ಮತ್ತು ಬೆಳ್ಳಿಪ್ಪಾಡಿ ಶ್ರೀ ಆದಿ ಮೊಗೇರ್ಕಳ ದೈವಸ್ಥಾನದಿಂದ ಶ್ರೀ ದೇವಸ್ಥಾನಕ್ಕೆ ಭವ್ಯ ಮೆರವಣಿಗೆಯೊಂದಿಗೆ ಹಸಿರು ಹೊರೆಕಾಣಿಕೆ ನಡೆಯಲಿದೆ.

ಡಿ.28 ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ ನಡೆದು ಬಳಿಕ ಸನ್ನಸಂತರ್ಪಣೆ ನಡೆಯಲಿದೆ. ಸಂಜೆ ಬ್ರಹ್ಮಶ್ರೀ ವೇದಮೂರ್ತಿ ನಾಗೇಶ್ ತಂತ್ರಿಗಳವರ ನೇತೃತ್ವದಲ್ಲಿ ಕಿರುಷಷ್ಠಿ ಉತ್ಸವ ಮತ್ತು ಕಟ್ಟೆ ಪೂಜೆ ನಡೆಯಲಿದೆ.

ಡಿ.28 ರಂದು ಸಂಜೆ ಗಂಟೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಸ್ಕಿರು ಕುಡ್ಲ ತಂಡದಿಂದ ಹಾಸ್ಯಮಯ ವಿಭಿನ್ನ ಶೈಲಿಯ ನಾಟಕ ’ತೆಲಿಕೆ ಬಂಜಿ ನಿಲಿಕೆ’ ನಡೆಯಲಿದೆ.

ಡಿ. 29 ರಂದು ಬೆಳಿಗ್ಗೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ಕೂಟೇಲಿನಿಂದ ಭಂಡಾರ ಬಂದು ಹುಲಿಚಾಮುಂಡಿ ನೇಮ ನಡೆಯಲಿದೆ.

ದಿನಾಂಕ 14-01-2023ನೇ ಶನಿವಾರ ಮಕರ ಸಂಕ್ರಮಣದಂದು ಬೆಳ್ಳಿಪ್ಪಾಡಿ ಜತ್ತಿಬೆಟ್ಟು ಮಳುದೇಲು ಎಂಬಲ್ಲಿರುವ ಪುರಾತನ ವನಶಾಸ್ತವು (ಅಯ್ಯಪ್ಪ) ಪೂಜೆಯು ಜರಗಲಿರುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!