Sunday, May 5, 2024
spot_imgspot_img
spot_imgspot_img

ಪುತ್ತೂರು: ನಿರಾಳ ಬಾರ್ ನಲ್ಲಿ ನಡೆದ ದರೋಡೆ ಪ್ರಕರಣ; ನಾಲ್ವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

- Advertisement -G L Acharya panikkar
- Advertisement -

ಪುತ್ತೂರು: ಸೆ.17 ರಂದು ನಿರಾಳ ಬಾರ್ ನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ನೆಕ್ಕಿಲ ನಿವಾಸಿ ಪ್ರತಾಪ್ ಮತ್ತು ಜಗದೀಶ@ಅಚ್ಚು ಜೈನರಗುರಿ ನಿವಾಸಿ ಶರತ್ ಕುಮಾರ ಮತ್ತು ಅಭಿಜಿತ್ ಬಂಧಿತ ಆರೋಪಿಗಳು.

ಘಟನೆ ವಿವರ:

ಆರ್ಯಾಪು ಗ್ರಾಮದ ವಳತ್ತಡ್ಕ ನಿವಾಸಿ ಅವಿನಾಶ್ (29) ಎಂಬವರು ಪುತ್ತೂರು ದರ್ಬೆಯಲ್ಲಿರುವ ಚೋಳಮಂಡಲ ಫೈನಾನ್ಸ್ ನಲ್ಲಿ ಲೋನ್ ರಿಕವರಿ ಕರ್ತವ್ಯವನ್ನು ಮಾಡಿಕೊಂಡಿದ್ದು, ಇವರಿಗೆ ಸೆ. 17ರಂದು ಗೆಳೆಯ ಸಚಿನ್ ಫೋನ್ ಕರೆ ಮಾಡಿ ನನಗೆ ಪ್ರತಾಪ್ ಎಂಬಾತನು ಬೆದರಿಕೆ ಕರೆ ಮಾಡಿ ನಿನ್ನನ್ನು ನೋಡಿಕೊಳ್ಳುವುದಾಗಿ ತಿಳಿಸಿರುವುದಾಗಿ ಹೇಳಿದ್ದು, ಈ ವೇಳೆ ಅವಿನಾಶ್ ಸಚಿನ್ ನಲ್ಲಿ ಪ್ರತಾಪ್‌ನ ಫೋನ್ ನಂಬರ್ ಪಡೆದು, ಬಳಿಕ ಪ್ರತಾಪ್‌ಗೆ ಫೋನ್ ಕರೆ ಮಾಡಿ ವಿಚಾರಿಸಿದಾಗ ಫೋನಿನಲ್ಲಿ ಏನೂ ಮಾತನಾಡುವುದು ಬೇಡ ಎದುರು ಬಂದು ಮಾತನಾಡುವಂತೆ ತಿಳಿಸಿದ್ದಾನೆ.

ದೇವಸ್ಥಾನದ ಗದ್ದೆಗೆ ಬಾ ನಾನೂ ಬರುತ್ತೇನೆ ಎಂದು ತಿಳಿಸಿದ್ದು, ಅವಿನಾಶ್ ತನ್ನ ಗೆಳೆಯರಾದ ಸಚಿನ್, ನಾಗೇಶ್, ಮನೋಜ್‌ರವರನ್ನು ಕರೆದುಕೊಂಡು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಗೆ ಹೋದಾಗ ಅಲ್ಲಿ ಪ್ರತಾಪ್ ಅಚ್ಚು @ ಜಗದೀಶ್ ಮತ್ತು ಇಬ್ಬರು ಇದ್ದರು. ಈ ವೇಳೆ ಪ್ರತಾಪ್‌ರಲ್ಲಿ ಏನು ವಿಷಯ ಎಂದು  ಕೇಳಿದಾಗ ಇದು ನಮ್ಮೊಳಗಿನ ವಿಷಯ ನೀನು ಯಾರು ಮಾತನಾಡಲು ಎಂದು ಹೇಳಿದ್ದು , ಆಗ ಅವಿನಾಶ್ ಆತ ನನ್ನ ಸ್ನೇಹಿತ ಏನು ವಿಷಯ ಇದ್ದರೂ ಇಲ್ಲಯೇ ಮಾತುಕತೆ ನಡೆಸಿ ಮುಗಿಸುವ ಎಂದಾಗ ಪ್ರತಾಪನು ನಿಮ್ಮನ್ನು ನೋಡಿಕೊಳ್ಳುವುದಾಗಿ ಹೇಳಿ ಅಲ್ಲಿಂದ ತೆರಳಿದ್ದು.

ಬಳಿಕ ಅವಿನಾಶ್ ತನ್ನ ಸ್ನೇಹಿತರೊಂದಿಗೆ ನಿರಾಲ ಬಾರ್‌ಗೆ ಹೋಗಿ ನಿರಾಲ ಬಾರ್‌ನ ಮೇಲಿನ ಅಂತಸ್ತಿನಲ್ಲಿ ಟೇಬಲ್‌ನಲ್ಲಿ ಕುಳಿತು ಮಾತನಾಡುತ್ತಿದ್ದ ವೇಳೆ ಪ್ರತಾಪ್ , ಅಚ್ಚು @ ಜಗದೀಶ , ಹಾಗೂ ಇತರ ಇಬ್ಬರು ಬಂದು ಪ್ರತಾಪ್‌ನು ನೀನು ಬಾರಿ ಫೋನ್ ಮಾಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಕಾಲರ್‌ಗೆ ಕೈಹಾಕಿ ಕೆನ್ನೆಗೆ ಹೊಡೆದಿದ್ದು, ಬಳಿಕ ಅಚ್ಚು @ ಜಗದೀಶ್ ಎಂಬಾತನು ಅವಿನಾಶ್ ರವರ ಬಲಕಣ್ಣಿಗೆ ಗುದ್ದಿದ್ದು ಬಳಿಕ ಆತನೊಂದಿಗೆ ಇದ್ದ ಇತರ ಇಬ್ಬರು ಕಾಲಿನಿಂದ ಹೊಟ್ಟೆಗೆ ತುಳಿದು, ಪ್ರತಾಪನು ಅವಿನಾಶ್ ರ ಕಿಸೆಯಲ್ಲಿದ್ದ ಲೋನ್ ರಿಕವರಿಯ ರೂ. 3720/- ಹಣವನ್ನು ತೆಗೆದುಕೊಂಡು, ಟೇಬಲ್ ನಲ್ಲಿ ಇಟ್ಟಿದ್ದ ಮೊಬೈಲ್ ಫೋನನ್ನು ತೆಗೆದುಕೊಂಡು ಹೋಗಿದ್ದಾನೆ.

ಬಳಿಕ ಅವಿನಾಶ್ ಅವರಿಂದ ತಪ್ಪಿಸಿ ರಸ್ತೆಗೆ ಬಂದಾಗ ಆರೋಪಿಗಳು ಅವಿನಾಶ್ ನ ಹಿಂದೆ ಬಂದು ಮುಂದಕ್ಕೆ ನೋಡಿಕೊಳ್ಳುವುದಾಗಿ ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ.

ಗಾಯಗೊಂಡಿದ್ದ ಅವಿನಾಶ್ ರನ್ನು ಸ್ನೇಹಿತರು ಚಿಕಿತ್ಸೆಗೆಂದು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ಪುತ್ತೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಾನ್ಯ ಪೊಲೀಸ್ ಅಧಿಕ್ಷಕರ ಮಾರ್ಗದರ್ಶನದಲ್ಲಿ ಪುತ್ತೂರು ಡಿವೈಎಸ್ಪಿ ಡಾ|| ವೀರಯ್ಯ ಹಿರೇಮಠರವರ ನೇತೃತ್ವದಲ್ಲಿ ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಸುನಿಲ್ ಕುಮಾರ್, ಪಿಎಸೈ ಶ್ರೀಕಾಂತ್ ರಾಠೋಡ್, ಸಿಬ್ಬಂದಿಗಳಾದ ಕೃಷ್ಣಪ್ಪ, ಸ್ಕರೀಯ, ಜಗದೀಶ, ಸುಬ್ರಹ್ಮಣ್ಯ, ಕಿರಣ ಕುಮಾರ,ಭೀಮಸೇನ ರವರು ನಾಲ್ವರು ಆರೋಪಿಗಳನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿ ಇಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

Related news

error: Content is protected !!