Sunday, May 19, 2024
spot_imgspot_img
spot_imgspot_img

ಪುತ್ತೂರು: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ; 40 ಕಡೆಗಳಲ್ಲಿ ವಾಂಟೆಡ್‌ ಪೋಸ್ಟರ್‌; ಎನ್.ಐ.ಎ ತಂಡದಿಂದ ಪುತ್ತೂರಿನಲ್ಲಿ ಶೋಧ ಕಾರ್ಯಾಚರಣೆ

- Advertisement -G L Acharya panikkar
- Advertisement -

ಪುತ್ತೂರು : ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್‌ ನೆಟ್ಟಾರು ಪ್ರಕರಣವು ದೇಶದದ್ಯಾಂತ ಸಂಚಲನ ಮೂಡಿಸಿತ್ತು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಪತ್ತೆಗೆ ಎನ್.ಐ.ಎ ಅಧಿಕಾರಿಗಳು ಒಟ್ಟು 14 ಲಕ್ಷ ಹಣವನ್ನು ಘೋಷಣೆ ಮಾಡಿದ್ದಾರೆ.

ಪ್ರವೀಣ್‌ ನೆಟ್ಟಾರು ಪ್ರಕರಣದ ಆರೋಪಿಗಳ ಪತ್ತೆಗೆ ಸಹಕಾರಿಯಾಗಲು ಎನ್‌.ಐ.ಎ ಅಧಿಕಾರಿಗಳು ಪುತ್ತೂರು, ಸುಳ್ಯ, ಬೆಳ್ಳಾರೆಯಲ್ಲಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳು ಸೇರಿ 40 ಕಡೆಗಳಲ್ಲಿ ನಾಲ್ಕು ಆರೋಪಿಗಳ ಫೋಟೋ ಇರುವ ವಾಂಟೆಡ್‌ ಪೋಸ್ಟರ್ ಅಂಟಿಸಿ, ಸುಳಿವು ಸಿಕ್ಕಿದ್ದಲ್ಲಿ ಪೊಲೀಸ್‌ರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ಎನ್.ಐ.ಎ ಯ ಆರು ಜನರ ತಂಡ ಟೆಕ್ನಿಕಲ್ ಮಾಹಿತಿ ಆಧಾರದಲ್ಲಿ ಇಂದು ಪುತ್ತೂರು ಸುತ್ತಮುತ್ತ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ:::: ಫೀಲ್ಡ್‌ಗಿಳಿದ NIAಯಿಂದ ಕಿಲ್ಲರ್‌ಗಳ ಹೆಡೆಮುರಿ ಕಟ್ಟಲು ಪ್ಲಾನ್‌..! ಹತ್ಯೆ ಮಾಡಲು ಯಾವ ರೀತಿಯಾಗಿ ಸ್ಕೆಚ್‌ ರೂಪಿಸಿದ್ರು ಗೊತ್ತಾ..?ಸದ್ಯದಲ್ಲೇ NIAಗೆ ಬಲೆಗೆ ಬೀಳಲಿದ್ದಾರೆ ಹಂತಕರು..?!

vtv vitla
- Advertisement -

Related news

error: Content is protected !!