

ಪುತ್ತೂರು: ಕೆದಂಬಾಡಿಯ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶ ಹಾಗೂ ಉತ್ಸವವು ಫೆ.1 ರಿಂದ ಫೆ. 7ರತನಕ ನಡೆಯಲಿದೆ.
ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ, ಕ್ಷೇತ್ರೇಶ ಹಾಗೂ ಊರ ಹತ್ತು ಸಮಸ್ತರ ಸಹಭಾಗಿತ್ವದಲ್ಲಿ ನೂತನವಾಗಿ ಪುನರ್ ನಿರ್ಮಾಣಗೊಂಡ ಎಲಿಯ ಶ್ರೀ ವಿಷ್ಣುಮೂರ್ತಿ ದೇವರ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶ ಹಾಗೂ ಉತ್ಸವವು ಫೆ.1ರಿಂದ ಫೆ. 7ರ ತನಕ ನಡೆಯಲಿದೆ.

ಫೆ. 01 ಮಂಗಳವಾರದಂದು ಹಸಿರುವಾಣಿ ಮೆರವಣಿಗೆಯು ಶ್ರೀ ದೇವತಾ ಭಜನಾ ಮಂದಿರ ಶ್ರೀಕ್ಷೇತ್ರ ದೇವಗಿರಿ ತಿಂಗಳಾಡಿಯಿಂದ ಪೂರ್ವಾಹ್ನ ಗಂಟೆ 11-00 ಕ್ಕೆ ಹೊರಟು, ಎಲೆಯ ಶ್ರೀ ವಿಷ್ಣುಮೂರ್ತಿ ದೇವಳಕ್ಕೆ ವೈಭವದ ಮೆರವಣಿಗೆಯೊಂದಿಗೆ ಬರಲಿದೆ. ಫೆ.2 ರಿಂದ ಫೆ.5ರವರೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ
ಫೆ. 1ರಂದು ಬೆಳಗ್ಗೆ ಗಂಟೆ 8:30ಕ್ಕೆ ಸಾಮೂಹಿಕ ಪ್ರಾರ್ಥನೆ, ಬಳಿಕ ಉಗ್ರಾಣ ಮೂಹೂರ್ತ, ಪಾಕಶಾಲೆ ಉದ್ಘಾಟನೆ, ಮುಖ್ಯ ವೇದಿಕೆ ಉದ್ಘಾಟನೆ, ಭಜನಾ ಕಾರ್ಯಕ್ರಮ ಉದ್ಘಾಟನೆ, ಬ್ರಹ್ಮಕಲಶೋತ್ಸವ ಕಾರ್ಯಾಲಯ ಉದ್ಘಾಟನೆ, ದೇವಳದ ನವೀಕೃತ ಮೆಟ್ಟಿಲು ಉದ್ಘಾಟನೆ, ಅಂಗಳದ ನವೀಕೃತ ಇಂಟರ್ಲಾಕ್ ಉದ್ಘಾಟನೆ, ನವೀಕೃತ ವಿದ್ಯುತ್ ಸಂಪರ್ಕ ಉದ್ಘಾಟನೆ, ಕೊಳವೆಬಾವಿ ಉದ್ಘಾಟನೆ, ಭದ್ರತಾ ಕೊಠಡಿಯ ಲಾಕರ್ ಉದ್ಘಾಟನೆ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಮುಂಡೂರು ಪ್ರಾಯೋಜಿತ)ಯನ್ನು ವಿವಿಧ ಗಣ್ಯರು ಉದ್ಘಾಟಿಸಲಿದ್ದಾರೆ.



ಫೆ. 6ರಂದು ಬೆಳಗ್ಗೆ 8:20ಕ್ಕೆ ಶ್ರೀ ವಿಷ್ಣು ಮೂರ್ತಿ ದೇವರ ಬಿಂಬ ಪ್ರತಿಷ್ಠೆ, ಜೀವಕಲಶಾಭಿಷೇಕ, ಜೀವಾವಾಹನೆ, ಶಿಖರ ಪ್ರತಿಷ್ಠೆ, ಪಿಲಿಭೂತ, ರಕ್ತೇಶ್ವರಿ, ಶಿರಾಡಿ, ಪಂಜುರ್ಲಿ ದೈವಗಳ ಪ್ರತಿಷ್ಠೆ ಮುಂದುವರಿದು ಪರಿಕಲಶ ಅಭಿಷೇಕ, ಬ್ರಹ್ಮಕಲಶ ಅಭಿಷೇಕ, ಪರಿವಾರ ಪ್ರತಿಷ್ಠೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

















