

ಮಾಣಿ: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್ ಮತ್ತು ಎಸ್‌ಎಸ್‌ಎಫ್ ಸೂರಿಕುಮೇರು ಯುನಿಟ್ ವತಿಯಿಂದ ಮಹ್‌ಳರತುಲ್ ಬದ್ರಿಯಾ ಮಜ್ಲಿಸ್ ಕಾರ್ಯಕ್ರಮವು ಬಶೀರ್ ಝುಹ್ರಿ ಉಸ್ತಾದರ ಸಜೀಪ ಬೇಂಕೆ ನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಅಲ್ ಹಾಜ್ ಬದ್ರುದ್ದೀನ್ ಅಹ್ಸನಿ ಇವರು ಸುಲ್ತಾನುಲ್ ಉಲಮಾ ಶೈಖುನಾ ಎಪಿ ಉಸ್ತಾದ್ ಇಜಾಝತ್ ನೀಡಿ ಅನುಷ್ಠಾನಗೊಳಿಸಲು ಕಾರ್ಯಕರ್ತರಿಗೆ ನೀಡಿದ ” ಮಹ್‌ಳರತುಲ್ ಬದ್ರಿಯಾ ” ಮಜ್ಲಿಸ್ ನಮ್ಮ ಪರಲೋಕ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಲ್ಲರೂ ಈ ಪವಿತ್ರವಾದ ಆಧ್ಯಾತ್ಮಿಕ ಬದರ್ ಮಜ್ಲಿಸ್ ನಲ್ಲಿ ಪಾಲ್ಗೊಂಡು ಯಶಸ್ವಿಯಾಗಿರಿ ಎಂದು ಹೇಳಿದರು. ಅಲ್ ಹಾಜ್ ಹಂಝ ಮುಸ್ಲಿಯಾರ್ ವಳಾಲ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ದುಆ ಮಾಡಿದರು.
ಕಾರ್ಯಕ್ರಮದಲ್ಲಿ ಬಹು| ಅಬ್ದುಲ್ ಹಮೀದ್ ಮುಸ್ಲಿಯಾರ್ ನಂದಾವರ,ಮಹ್‌ಮೂದ್ ಸಅದಿ ತಾಳಿತ್ತನೂಜಿ, ಮನ್ಸೂರ್ ಕಲ್ಲಡ್ಕ, ಯೂಸುಫ್ ಹಾಜಿ ಸೂರಿಕುಮೇರು, ಅಬೂಬಕ್ಕರ್ ಹಾಜಿ ವಳಾಲ್, ಅಬ್ದುಲ್ ಕರೀಂ ಸೂರಿಕುಮೇರು, ಹಂಝ ಸೂರಿಕುಮೇರು, ಅಬ್ದುಲ್ ಖಾದರ್ ಬರಿಮಾರ್, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಲೀಂ ಮಾಣಿ ಸ್ವಾಗತಿಸಿ ಧನ್ಯವಾದಗೈದರು.








