Monday, July 20, 2026
spot_imgspot_img
spot_imgspot_img

ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಸಂಭ್ರಮ

- Advertisement -
- Advertisement -

ಪುತ್ತೂರು: ನಾಡಿನೆಲ್ಲೆಡೆ‌ ದಸರಾ ಸಂಭ್ರಮ‌ ಕಳೆಗಟ್ಟಿದ್ದು ಇಂದು ಆಯುಧ ಪೂಜೆಯ ಸಂಭ್ರಮ ಮೇಳೈಸಿದೆ. ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಇಂದು ಆಯುಧ ಪೂಜೆ ನಡೆಯಿತು.

ಸದಾ ಗತ್ತು ಗಾಂಭೀರ್ಯದಿಂದಿರುವ ಪೊಲೀಸ್ ಠಾಣೆ ವಿವಿಧ ಅಲಂಕಾರಗಳೊಂದಿಗೆ ಕಂಗೊಳಿಸುತ್ತಿತ್ತು. ವಾಹನ, ಪಿಸ್ತೂಲ್, ಬೇಡಿ ಹೀಗೆ ಠಾಣೆಯಲ್ಲಿರುವ ವಸ್ತುಗಳಿಗೆ ಆಯುಧ ಪೂಜೆ ನೆರವೇರಿತು.

ಈ ವೇಳೆ ಪೊಲೀಸರು ಇನ್ಸ್ಪೆಕ್ಟರ್ ಎಮ್.ಎನ್ ರಾವ್, ಪಿ.ಎಸ್. ಐ ಸೇಸಮ್ಮ, ಎಎಸ್ಐ ರಾಮಪ್ಪ ಗೌಡ, ಚಂದ್ರಹಾಸ ಶೆಟ್ಟಿ ಮತ್ತು ಸಿಬ್ಬಂದಿಗಳು ಹಬ್ಬದ ಸಡಗರದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

- Advertisement -

Related news

error: Content is protected !!