

ಪುತ್ತೂರು: ಕೋಳಿ ಫಾರ್ಮ್‌ನಲ್ಲಿ ಕೆಲಸಕ್ಕಿರುವ ಮಹಿಳೆಯ ಮೇಲೆ ಆ ಫಾರ್ಮ್ ನ ರೈಟರ್ ಅತ್ಯಾಚಾರ ನಡೆಸಿ, ಕೃತ್ಯವನ್ನು ವಿಡಿಯೋ ಚಿತ್ರಿಕರಿಸಿ ಮತ್ತೆ ಮತ್ತೆ ಸಹಕರಿಸುವಂತೆ ಬೆದರಿಕೆಯೊಡ್ಡಿದ್ದಾನೆ ಎಂದು ಪುತ್ತೂರಿನ ಗ್ರಾಮಾಂತರ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ.

ಅರಿಯಡ್ಕ ಗ್ರಾಮದ ಮಡ್ಯಂಗಳದಲ್ಲಿರುವ ಕೋಳಿ ಫಾರ್ಮ್‌ನಲ್ಲಿ ರೈಟರ್ ಆಗಿರುವ ಉಮ್ಮರ್ ಈ ಕೃತ್ಯ ಎಸಗಿದ್ದಾನೆ. ಮೇ.5 ರಂದು ಸಂತ್ರಸ್ತೆಯು ಕೋಳಿ ಫಾರ್ಮಿನ ಬಾತ್‌ರೂಮ್‌ನಲ್ಲಿದ್ದ ವೇಳೆ ಆಲ್ಲಿಗೆ ಬಂದ ಆರೋಪಿ ಉಮ್ಮರ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಕೆ ಈ ವೇಳೆ ಜೋರಾಗಿ ಕಿರುಚಾಡಿದ್ದು, ಈ ವೇಳೆ ಆಕೆಯ ಬಾಯಿಯನ್ನು ತನ್ನ ಕೈಗಳಿಂದ ಬಲವಂತವಾಗಿ ಮುಚ್ಚಿದ್ದಾನೆ. ಈ ಪೈಶಾಚಿಕ ಕೃತ್ಯದ ಬಗ್ಗೆ, ಮಹಿಳೆಯು ತನ್ನ ಗಂಡನಲ್ಲಿ ತಿಳಿಸುವುದಾಗಿ ಆರೋಪಿಯಲ್ಲಿ ತಿಳಿಸಿದ್ದಾರೆ.

ಅತ್ಯಾಚಾರ ನಡೆಸಿದ ಬಳಿಕ ಅದನ್ನು ವಿಡಿಯೋ ಚಿತ್ರೀಕರಿಸಿ ಆರೋಪಿಯು ಮಹಿಳೆಯ ಪತಿಗೆ ಕಳುಹಿಸಿದ್ದು, ಅತ್ಯಾಚಾರ ಎಸಗಿರುವ ಬಗ್ಗೆ, ಹೊರಗೆ ತಿಳಿಸಿದರೆ ಕೊಲೆಗೈಯುವುದಾಗಿ ಜೀವ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಆರೋಪಿ ಉಮ್ಮರ್ ವಿರುದ್ಧ ಐಪಿಸಿ ಕಲಂ 376 ಹಾಗೂ ಐಟಿ ಅಕ್ಸ್ 67 ರಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಪೋಕ್ಸೋ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ, ₹80 ಸಾವಿರ ದಂಡ
- ವೈವಾಹಿಕ ಕಲಹದ ನಡುವೆ ಮಕ್ಕಳನ್ನು ಬಾವಿಗೆ ಎಸೆದ ಆರೋಪ; ಓರ್ವ ಮಗು ಮೃತ್ಯು
- ವಿಟ್ಲ: “ಭಾರತ್ ಪೆಟ್ರೋಲಿಯಂ” ಪೆಟ್ರೋಲ್ ಪಂಪ್ನಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದಾರೆ
- ಅಡ್ಯನಡ್ಕ ಜನತಾ ಪ್ರೌಢಶಾಲೆಯಲ್ಲಿ ವಿಟ್ಲ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
- ಮಡಿಕೇರಿ: ಬೈಕ್ನಲ್ಲಿ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ – ಇಬ್ಬರು ಗಂಭೀರ










