Saturday, June 27, 2026
spot_imgspot_img
spot_imgspot_img

ಪುತ್ತೂರು: ಯುವಕರ ನಡುವೆ ಮಾತಿನ ಚಕಮಕಿ; ತಲವಾರು ದಾಳಿ ಯತ್ನ, ದೂರು ದಾಖಲು

- Advertisement -
- Advertisement -

ಪುತ್ತೂರು: ಯುವಕರ ಮಧ್ಯೆ ಗಲಾಟೆ ನಡೆದು ಇಬ್ಬರು ಯುವಕರು ತಲವಾರಿನಲ್ಲಿ ಹಲ್ಲೆಗೆ ಯತ್ನಿಸಿ ಪರಾರಿಯಾಗಿರುವ ಘಟನೆ ಬನ್ನೂರು ಜೈನರಗುರಿ ಸಮೀಪ ನಡೆದಿದೆ.

ಜು.6ರಂದು ರಾತ್ರಿ ಯುವಕರ ಗುಂಪೊಂದು ಕುಳಿತುಕೊಂಡು ಮಾತನಾಡುತ್ತಿದ್ದ ಸಮಯ ಇನ್ನೊಂದು ಕೋಮಿನ ಯುವಕರ ಗುಂಪು ಅಲ್ಲಿಗೆ ಆಗಮಿಸಿದ್ದು ಈ ಸಂದರ್ಭ ಕ್ಷುಲ್ಲಕ ವಿಚಾರದಲ್ಲಿ ಅವರೊಳಗೆ ಮಾತಿನ ಚಕಮಕಿ, ಗಲಾಟೆ ನಡೆದಿದೆ.

ಬಳಿಕ ಸ್ಥಳೀಯ ಅಂಗಡಿಯೊಂದರಲ್ಲಿದ್ದ ಕೆಲ ಯುವಕರ ಮೇಲೆ ಇನ್ನೊಂದು ಕೋಮಿನ ಯುವಕರಿಬ್ಬರು ತಲವಾರಿನಿಂದ ಹಲ್ಲೆ ನಡೆಸಲು ಯತ್ನಿಸಿ ಪರಾರಿಯಾಗಿದ್ದಾರೆ. ಘಟನೆಯಿಂದಾಗಿ ಸ್ಥಳದಲ್ಲಿ ತುಸು ಹೊತ್ತು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತಾದರೂ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ಸಂಭಾವ್ಯ ಘರ್ಷಣೆಯನ್ನು ತಪ್ಪಿಸಿದ್ದಾರೆ ಎಂದು ಹೇಳಲಾಗಿದೆ.

ಘಟನೆ ಕುರಿತು ಫಯಾಝ್ ಎಂಬವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಅಭಿಜಿತ್ ಮತ್ತು ಶರತ್ ಎಂಬೀರ್ವರು ತಲವಾರು ಪ್ರದರ್ಶಿಸುತ್ತಾ ಬೆದರಿಕೆಯೊಡ್ಡಿದ್ದಾಗಿ ಆರೋಪಿಸಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

- Advertisement -

Related news

error: Content is protected !!