




ಮಂಗಳೂರು: ಲಯನ್ಸ್ ಇಂಟರ್ನ್ಯಾಷನಲ್ 317d ವತಿಯಿಂದ ಲಯನ್ಸ್ ಕ್ಲಬ್ ಮಂಗಳೂರು ಐಕ್ಯ ಸ್ಥಾಪನೆಗೊಂಡಿದ್ದು, ಇದರ ಉದ್ಘಾಟನೆಯನ್ನು ಜಿಲ್ಲಾ ರಾಜ್ಯಪಾಲರಾದ ಕುಡ್ಪಿ ಅರವಿಂದ ಶೆಣೈ ಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು ಮತ್ತು ನೂತನ ಕ್ಲಬ್ ಗೆ ಶುಭವನ್ನು ಕೋರಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ರಾಜ್ಯಪಾಲರಾದ ಅರುಣ್ ಶೆಟ್ಟಿ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು ಮತ್ತು ಶುಭವನ್ನು ಹರಿಸಿದರು. ಪ್ರಥಮ ಉಪರಾಜ್ಯ ಪಾಲ ಚುನಾಯಿತ ಗೋವರ್ಧನ್ ಶೆಟ್ಟಿಯವರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ದ್ವಿತೀಯ ಉಪರಾಜ್ಯ ಪಾಲ ವೆಂಕಟೇಶ್ ಹೆಬ್ಬಾರ್ ಶುಭ ಸಂಸನಿ ಮಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ನೂತನ ಕ್ಲಬ್ ನ ಅಧ್ಯಕ್ಷ ಬಾಬು ದೇವಾಡಿಗ ವಹಿಸಿದರು. ವೇದಿಕೆಯಲ್ಲಿ ಪ್ರಥಮ ಮಹಿಳೆ ಮಮತಾ ಶೆಣೈ, ಸಂಪುಟ ಕಾರ್ಯದರ್ಶಿ ಹೆಚ್ಆರ್ ಚಂದ್ರೇಗೌಡ, ಕೋಶಾಧಿಕಾರಿ ಬಾಲಕೃಷ್ಣ ಹೆಗಡೆ, ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ, ಗವರ್ನರ್ ಸಂಯೋಜಕಿ ಜ್ಯೋತಿ ಎಸ್ ಶೆಟ್ಟಿ, ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ ರೈ, ಮುಂತಾದವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಎಕ್ಸ್ಟೆಂಶನ್ ಚೇರ್ಮನ್ ರಾಮಚಂದ್ರರಾವ್ ಸ್ವಾಗತಿಸಿ ಕಾರ್ಯದರ್ಶಿ ಹೊಂದಿಸಿದರು. ಕಾರ್ಯಕ್ರಮವನ್ನು ಪ್ರಶಾಂತ್ ಶೆಟ್ಟಿ ನಿರೂಪಿಸಿದರು. ಈ ಕ್ಲಬ್ ಅನ್ನು ಸ್ಥಾಪನೆ ಮಾಡಲು ಕಾರಣೀಭೂತರಾದ ದೇವಿ ಪ್ರಸಾದ್ ರಾವ್ ರಾಮಚಂದ್ರರಾವ್ ಹಾಗೂ ಸುನಿಲ್ ಹೆಗಡೆಯವರನ್ನು ಗವರ್ನರ್ ಅಭಿನಂದಿಸಿದರು.








