Friday, April 19, 2024
spot_imgspot_img
spot_imgspot_img

ಪುತ್ತೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಲಕ್ಷಾಂತರ ರೂ. ವಂಚನೆ; ಆರೋಪಿಯ ವಿರುದ್ಧ ಪ್ರಕರಣ ದಾಖಲು

- Advertisement -G L Acharya panikkar
- Advertisement -

ಪುತ್ತೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣ ಪಡೆದುಕೊಂಡು ನಂಬಿಕೆ ದ್ರೋಹ, ವಂಚನೆ ಎಸಗಿರುವ ಘಟನೆ ಮಾಡ್ನೂರು ಗ್ರಾಮದ ಅಮ್ಚಿನಡ್ಕದಲ್ಲಿ ನಡೆದಿದೆ.

ವಂಚನೆಗೊಳಗಾದವರು ಮಹಮ್ಮದ್ ಸಾಧಿಕ್ ಎಂದು ತಿಳಿದು ಬಂದಿದೆ. ವಂಚಿಸಿದ ಆರೋಪಿಯನ್ನು ಎಲ್ವಿಸ್ ಕನ್ಸನ್ ಟೈನ್ ಬರೆಟ್ಟೋ ಎಂದು ಗುರುತಿಸಲಾಗಿದೆ.

ಕೆನಡಾದಲ್ಲಿ ಉದ್ಯೋಗವನ್ನು ಒದಗಿಸಿಕೊಡುವುದಾಗಿ ಭರವಸೆಯನ್ನು ನೀಡಿ ಪಾಸ್ ಪೋರ್ಟ್ ಮತ್ತು 6,50,000 ರೂ. ಹಣವನ್ನು ಪಡೆದುಕೊಂಡು ವಿದೇಶದಲ್ಲಿ ಉದ್ಯೋಗವನ್ನು ಮಾಡಿಕೊಡದೇ ಪಡೆದುಕೊಂಡ ಹಣ ಹಾಗೂ ಪಾಸ್ ಪೋರ್ಟ್ ಅನ್ನು ಹಿಂತಿರುಗಿಸದೆ ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿರುವುದಾಗಿ ಸಾಧಿಕ್ ಆರೋಪಿ ಎಲ್ವಿಸ್ ವಿರುದ್ಧ ದೂರು ನೀಡಿದ್ದಾರೆ.

ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ. ಕ್ರ 75/2021 ಕಲಂ 406,420,465,468 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!