- Advertisement -
- Advertisement -
ಕೆಂಪು ಕಲ್ಲು ಲಾರಿ ಚಾಲಕರಿಂದ ನಾಳೆ ಕಲ್ಲು ಸಾಗಾಟ ಸ್ಥಗಿತ– ಪ್ರತಿಭಟನೆಗೆ ಬೆಂಬಲ






ವಿಟ್ಲ: ಪೆರುವಾಯಿ–ಪೇರಡ್ಕ ಸೇತುವೆಯ ಪುನರ್‌ನಿರ್ಮಾಣಕ್ಕೆ ಆಗ್ರಹಿಸಿ ನಿನ್ನೆ ನಡೆದ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಕೇರಳ ಹಾಗೂ ಬೆರಿಪದವು ಭಾಗದಿಂದ ಆಗಮಿಸುವ ಕೆಂಪು ಕಲ್ಲು ಲಾರಿ ಚಾಲಕ-ಮಾಲಕರು ಜೂನ್ 24ರ ಬುಧವಾರ ಕಲ್ಲು ಸಾಗಾಟವನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಸೇತುವೆಯ ದುರವಸ್ಥೆಯಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದು, ಶೀಘ್ರದಲ್ಲಿ ಸೇತುವೆ ಪುನರ್‌ನಿರ್ಮಾಣ ಕಾರ್ಯ ಆರಂಭಿಸಬೇಕೆಂದು ಆಗ್ರಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಲು ಸಾಗಾಟ ಸ್ಥಗಿತಗೊಳಿಸುವ ಮೂಲಕ ಲಾರಿ ಚಾಲಕ –ಮಾಲಕರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
- Advertisement -








