Thursday, April 25, 2024
spot_imgspot_img
spot_imgspot_img

ಪುತ್ತೂರು: 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

- Advertisement -G L Acharya panikkar
- Advertisement -

ಪುತ್ತೂರು: ಕಳವು ಪ್ರಕರಣದಲ್ಲಿ ಸುಮಾರು 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಪುತ್ತೂರು ತಾಲೂಕು ಚಾರ್ವಾಕ ಗ್ರಾಮದ ಮುದ್ವ ನಿವಾಸಿ ಲಿಂಗಪ್ಪ ಎನ್ನಲಾಗಿದೆ.


ಆರೋಪಿಯು ಸುಮಾರು 36ವರ್ಷಗಳ ಹಿಂದೆ ಪ್ರಕರಣ ದಾಖಲಾದ ಕೂಡಲೇ ತಲೆಮರೆಸಿಕೊಂಡಿದ್ದ. ಈತನು ಶಿವಮೊಗ್ಗದಲ್ಲಿ 5 ವರ್ಷಗಳಿಂದ ಅಟೋ ಚಾಲಕನಾಗಿದ್ದು, ನಂತರ ಮಂಗಳೂರಿನ ತಣ್ಣೀರು ಬಾವಿಗೆ ಬಂದು ಅನ್ಯಕೋಮಿನ ಹುಡುಗಿಯನ್ನು ಮದುವೆಯಾಗಿ ತನ್ನ ಹೆಸರನ್ನು ರೆಹಮತ್ ಖಾನ್ ಎಂದು ಬದಲಾಯಿಸಿಕೊಂಡು ತಣ್ಣೀರಿ ಬಾವಿಯಲ್ಲಿ ವಾಸವಾಗಿದ್ದನು.

ಸುಮಾರು 29 ವರ್ಷಗಳ ಕಾಲ ತಣ್ಣೀರು ಬಾವಿಯಲ್ಲಿ ಕಪ್ಪು ಚಿಪ್ಪು ( ಸೆಲ್ಫಿಸ್ ) ವ್ಯಾಪಾರ ಮಾಡಿಕೊಂಡಿದ್ದು, ನಂತರ 3 ವರ್ಷಗಳಿಂದ ಓಶಿಯನ್ ಕಂಪೆನಿಯಲ್ಲಿ ಕಂನ್ಸಟ್ರಕ್ಷನ್ ಕೆಲಸಕ್ಕೆ ಸೇರಿ ಮುಂಡಗೋಡಿ, ಹುಬ್ಬಳ್ಳಿ, ಬೆಳಗಾಂ ಮುಂತಾದ ಕಡೆ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ. ಈತನು ಒಂದು ವಾರದಿಂದ ಮಂಗಳೂರಿನ ತಿರುವೈಲ್ ಗ್ರಾಮ , ವಾಮಂಜೂರು ಹಾಲಿ ವಿಳಾಸಕ್ಕೆ ಬಂದಿದ್ದ ಈ ವಿಚಾರ ಪೊಲೀಸರಿಗೆ ತಿಳಿದು ಆರೋಪಿಯನ್ನು ಬಂಧಿಸಿದ್ದಾರೆ. ಪುತ್ತೂರು ನಗರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Related news

error: Content is protected !!