Thursday, April 25, 2024
spot_imgspot_img
spot_imgspot_img

ನೀಟ್​ ಪರೀಕ್ಷೆ ಬರೆಯುವ ಮುನ್ನ ಒಳ ಉಡುಪು ಕಳಚಲು ಹೇಳಿದ ಕೊಠಡಿ ಮೇಲ್ವಿಚಾರಕ

- Advertisement -G L Acharya panikkar
- Advertisement -
vtv vitla

ಕೇರಳ: ದೇಶಾದ್ಯಂತ ನೀಟ್​ ಪರೀಕ್ಷೆ ನಡೆದಿದೆ. ಇದರ ನಡುವೆ ಕೇರಳದ ಕಾಲೇಜು ಒಂದರಲ್ಲಿ ಅಮಾನವೀಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಸೋಮವಾರ ದೇಶದ ಹಲವು ಭಾಗಗಳಲ್ಲಿ ವಿದ್ಯಾರ್ಥಿಗಳು ನೀಟ್​ ಪರೀಕ್ಷೆಯ ಬರೆಯಲು ಪರೀಕ್ಷಾ ಕೇಂದ್ರದ ಒಳಗಡೆ ಆತ್ಮವಿಶ್ವಾದಿಂದ ಹೊರಟರೆ, ಕೇರಳದ ಕೊಲ್ಲಂನಲ್ಲಿರುವ ಮಾರ್ ಥೋಮಾ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಸಂಸ್ಥೆಯು ಪರೀಕ್ಷಾ ಕೇಂದ್ರಕ್ಕೆ ಕೆಲ ಹೆಣ್ಣು ಮಕ್ಕಳು ತೆರಳುವ ಮುನ್ನ ಒಳಉಡುಪುಗಳನ್ನು ತೆಗೆಯಿರಿ ಎಂದು ಹೇಳಿರುವ ಆರೋಪ ಕೇಳಿಬಂದಿದೆ.

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ನನ್ನ ಮಗಳಿಗೆ ಒಳಉಡುಪುಗಳನ್ನು ತೆಗೆಯುವಂತೆ ಕೇಳಲಾಗಿದೆ ಎಂದು ಕೊಲ್ಲಂ ಜಿಲ್ಲೆಯ ಪಾಲಕರೊಬ್ಬರು ಹೇಳಿದ್ದಾರೆ. ಈ ಘಟನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಬಳಿಕ ಮಾನವ ಹಕ್ಕುಗಳ ಆಯೋಗವು ತನಿಖೆ ನಡೆಸಿ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಕೊಲ್ಲಂ ಗ್ರಾಮಾಂತರ ಎಸ್‌ಪಿಗೆ ಸೂಚಿಸಿದೆ.

ವಿದ್ಯಾರ್ಥಿಯ ತಂದೆ ಕೊಲ್ಲಂ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಕೊಟ್ಟಾರಕರ ಪೊಲೀಸರಿಗೆ ದೂರು ನೀಡಿದ ದೂರುದಾರರು, ಚಾತಮಂಗಲದಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮೊದಲು ತಮ್ಮ ಮಗಳು ಸೇರಿದಂತೆ ಮಹಿಳಾ ನೀಟ್ ಆಕಾಂಕ್ಷಿಗಳು ತಮ್ಮ ಒಳಉಡುಪುಗಳನ್ನು ತೆಗೆಯುವಂತೆ ಕೇಳಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಪರೀಕ್ಷೆ ಕೊಠಡಿ ಪ್ರವೇಶಕ್ಕೆ ಮೊದಲು ತಮ್ಮ ಒಳ ಉಡುಪನ್ನು ತೆಗೆಯುವಂತೆ ಹೇಳಿ ಆರಂಭಿಕ 100 ವಿದ್ಯಾರ್ಥಿನಿಯರನ್ನು ಅವಮಾನಿಸಲಾಗಿದೆ. ಡ್ರೆಸ್ ಕೋಡ್ ಪ್ರಕಾರ, ವಿದ್ಯಾರ್ಥಿಗಳು ಪರೀಕ್ಷಾ ಹಾಲ್‌ಗೆ ಪ್ರವೇಶಿಸುವಾಗ ಯಾವುದೇ ಲೋಹದ ವಸ್ತು ಅಥವಾ ಪರಿಕರಗಳನ್ನು ಧರಿಸಲು ಮಾತ್ರವಷ್ಟೇ ಅನುಮತಿ ಇರಲಿಲ್ಲ. ಆದರೆ ವಿದ್ಯಾರ್ಥಿನಿಯರ ಬಳಿ ಒಳ ಉಡುಪನ್ನು ತೆಗೆದಿಡುವಂತೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಹೇಳಿದ್ದಾಗಿ ಆರೋಪ ಕೇಳಿಬಂದಿದೆ.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಮಾರ್ಗಸೂಚಿಗಳನ್ನು ಉಲ್ಲೇಖಿಸಿದ ಸಂತ್ರಸ್ತೆಯ ತಂದೆ, ಯಾವುದೇ ರೀತಿಯ ಒಳಉಡುಪಿನ ಮೇಲೆ ಯಾವುದೇ ನಿಷೇಧವನ್ನು ಏರಿಲ್ಲ. ನಾವು ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ. ಆದರೆ, ಸಿಬ್ಬಂದಿ ಒಳಉಡುಪುಗಳನ್ನು ತೆಗೆಯದೆ ತರಗತಿಗೆ ಪ್ರವೇಶಿಸಲು ಬಿಡಲಿಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಆರೋಪವನ್ನು ಮಾರ್ಥೋಮಾ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ನಿರಾಕರಿಸಿದೆ. ಘಟನೆಯ ಕುರಿತು ರಾಜ್ಯ ಮಹಿಳಾ ಆಯೋಗವೂ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

- Advertisement -

Related news

error: Content is protected !!