Thursday, May 16, 2024
spot_imgspot_img
spot_imgspot_img

ಪುತ್ತೂರು: PFI, SDPI ಸಮಾಜಘಾತುಕ ಸಂಘಟನೆಯ ಗೂಂಡಾಗಳಿಂದ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ; ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ತೀವ್ರ ಖಂಡನೆ.!!

- Advertisement -G L Acharya panikkar
- Advertisement -
vtv vitla
vtv vitla

ಪುತ್ತೂರು: ಪಿಎಫ್ಐ ಎಸ್ಡಿಪಿಐ ಎಂಬ ಸಮಾಜಘಾತುಕ ಸಂಘಟನೆಯ ಗೂಂಡಾಗಳಿಂದ ಉಪ್ಪಿನಂಗಡಿಯಲ್ಲಿ ಪೊಲೀಸರ ಮೇಲೆ ಮಾರಕಾಯುಧಗಳಿಂದ ನಡೆದ ಹಲ್ಲೆಯನ್ನು ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಖಂಡಿಸುತ್ತದೆ.

vtv vitla

ಹಿಂದೂ ಮೀನು ವ್ಯಾಪಾರಿಗಳ ಕೊಲೆಯತ್ನ ಕೇಸಿಗೆ ಸಂಬಂಧಿಸಿದಂತೆ ಪೊಲೀಸರು 3 ಮಂದಿ ಪಿಎಫ್ಐ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿದ್ದರು. ಇದರ ವಿರುದ್ಧವಾಗಿ ನಿನ್ನೆ ಮಧ್ಯಾಹ್ನದಿಂದ ಉಪ್ಪಿನಂಗಡಿ ಠಾಣೆಯ ಮುಂಬಾಗ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು. ಇದೊಂದು ಪೂರ್ವ ನಿಯೋಜಿತ ಸಂಚು ಡಿಜೆ ಹಳ್ಳಿ ಕೆಜಿ ಹಳ್ಳಿಯಂತೆ ಉಪ್ಪಿನಂಗಡಿಯನ್ನು ಕೋಮು ಪ್ರಚೋದನೆಗೆ ದೂಡುವ ಒಂದು ಪ್ರಯತ್ನವಾಗಿದೆ.

ಯಾಕೆಂದರೆ ನಿನ್ನೆ ಸಂಜೆ 6 ಗಂಟೆಗೆ ಉಪ್ಪಿನಂಗಡಿ ಮಸೀದಿಯ ಒಳಗಡೆ ಆರು ಆಂಬುಲೆನ್ಸ್ ಗಳನ್ನು ತಂದು ನಿಲ್ಲಿಸಿರುತ್ತಾರೆ, ನಂತರ ಪ್ರತಿಭಟನೆಗೆ ಕಾರ್ಯಕರ್ತರನ್ನು ಸೇರಿಸುತ್ತಾರೆ. ಪೊಲೀಸರ ಮೇಲೆ ಕಲ್ಲು ತೂರಾಟ ಪ್ರಾರಂಭವಾಗುತ್ತದೆ. ರಸ್ತೆಯಲ್ಲಿ ನಮಾಜ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡಲಾಗುತ್ತದೆ. ಪೊಲೀಸರ ಮೇಲೆ ಚಾಕು ಇರಿತವಾಗುತ್ತದೆ.

vtv vitla
vtv vitla

ಪಿಎಫ್ಐ ಕಾರ್ಯಕರ್ತರ ಕೈಯಲ್ಲಿದ್ದ ತಲವಾರಿನಿಂದ ಮಸೀದಿಯ ತಂಗಲ್ ಮೇಲೆ ದಾಳಿ ಮಾಡಲಾಗುತ್ತದೆ, ನಂತರ ಆರೋಪವನ್ನು ಪೊಲೀಸರ ಮೇಲೆ ಹೊರಿಸಲಾಗುತ್ತದೆ, ಬಂದವರೆಲ್ಲ ಸುಳ್ಯ, ಈಶ್ವರಮಂಗಲ, ಬೆಳ್ತಂಗಡಿ, ಕಡಬ ಭಾಗದಿಂದ ಪಿಎಫ್ಐ ಕಾರ್ಯಕರ್ತರು ಬಂದಿರುತ್ತಾರೆ, ಪೊಲೀಸರ ಮೇಲೆ ಎಸೆದ ಕಲ್ಲು ಅವರ ಕಾರ್ಯಕರ್ತರ ಮೇಲೆ ಬಿದ್ದು ಪೆಟ್ಟಾಗಿದ್ದು ಬಿಟ್ಟರೆ ಪೊಲೀಸರಿಂದ ಅಲ್ಲ , ಪೊಲೀಸರ ಕೈಯಲ್ಲಿ ಯಾವುದೇ ಮಾರಕಾಸ್ತ್ರಗಳು ಇರುವುದಿಲ್ಲ.

ಆದ್ದರಿಂದ ಮತಾಂದ ಪಿಎಫ್ಐ ಕಾರ್ಯಕರ್ತರು ಪೊಲೀಸ್ ಅಧಿಕಾರಿಗಳ ಮೇಲೆ ನೀಡಿದ ದೂರನ್ನು ಯಾವುದೇ ಕಾರಣಕ್ಕೂ ಮಾನ್ಯ ಮಾಡಬಾರದು, ಯಾಕೆಂದರೆ ಉಪ್ಪಿನಂಗಡಿಯಲ್ಲಿ ನಡೆಯಬಹುದಾದ ಬಹುದೊಡ್ಡ ಅನಾಹುತವನ್ನು ಪೊಲೀಸ್ ಇಲಾಖೆ ಹಿಮ್ಮೆಟ್ಟಿಸಿದೆ, ಆದ್ದರಿಂದ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ನಡೆದ ಚೂರಿ ಇರಿತದ ದಾಳಿಕೋರರನ್ನು ಈ ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗಿ ಪೊಲೀಸ್ ವರಿಷ್ಠಾಧಿಕಾರಿಯವರಲ್ಲಿ ಹಾಗೂ ಗೃಹ ಇಲಾಖೆಯನ್ನು ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಆಗ್ರಹಿಸಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

vtv vitla
vtv vitla
vtv vitla
- Advertisement -

Related news

error: Content is protected !!