Tuesday, April 30, 2024
spot_imgspot_img
spot_imgspot_img

ಪುದೀನಾದಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನಗಳಿವೆ ಗೊತ್ತಾ?

- Advertisement -G L Acharya panikkar
- Advertisement -

ಶೀತದ ವಿರುದ್ಧ ಹೋರಾಡಲು ಪುದೀನಾ ಉತ್ತಮ. ಶೀತದ ಸಮಯದಲ್ಲಿ, ಉಸಿರಾಡಲು ಕಷ್ಟವಾಗುತ್ತಿದ್ದಾಗ ಪುದೀನಾ ಉತ್ತಮ ಪರಿಹಾರ. ಪುದೀನಾ ನೈಸರ್ಗಿಕವಾಗಿ ಮೂಗು, ಗಂಟಲು, ಶ್ವಾಸನಾಳ ಮತ್ತು ಶ್ವಾಸಕೋಶದ ಕಟ್ಟುವಿಕೆಯನ್ನು ತಗ್ಗಿಸುತ್ತದೆ.

ನೆನಪಿನ ಶಕ್ತಿಯದ ಪುದೀನಾ ಸ್ಮರಣಾಶಕ್ತಿಯನ್ನು ಸುಧಾರಿಸುತ್ತದೆ. ನಿಯಮಿತವಾಗಿ ಪುದೀನಾ ಸೇವನೆಯಿಂದ ಮೆದುಳಿನ ಕಾರ್ಯನಿರ್ವಹಣೆ ಮತ್ತು ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ.

ಆಸ್ತಮಾ ವನ್ನು ನಿಯಮಿತವಾಗಿ ಪುದೀನಾ ಸೇವನೆ ಆಸ್ತಮಾಕ್ಕೂ ಪರಿಹಾರ ನೀಡುತ್ತದೆ. ಇದು ಶ್ವಾಸಕೋಶದಲ್ಲಿ ಸಂಗ್ರಹವಾದ ಕಫವನ್ನು ಸಡಿಲಗೊಳಿಸಲು ಸಹಕಾರಿ. ಮೂಗಿನಲ್ಲಿ ಊದಿಕೊಂಡ ಪೊರೆಗಳನ್ನು ಕುಗ್ಗಿಸಿ ಸುಲಭ ಉಸಿರಾಟಕ್ಕೆ ಅನುವು ಮಾಡಿಕೊಡುತ್ತದೆ.

ತಲೆನೋವುಗಳಿಗೆ ಪುದೀನಾದಲ್ಲಿ ಮೆಂಥಾಲ್ ಇದ್ದು, ಅದು ಸ್ನಾಯುಗಳಿಗೆ ವಿಶ್ರಾಂತಿ ನೀಡಲು ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಣೆ ಮೇಲೆ ಪುದೀನಾ ರಸವನ್ನು ಹಚ್ಚುವುದರಿಂದ ತಲೆನೋವಿನಿಂದಲೂ ಪರಿಹಾರ ಪಡೆಯಬಹುದಾಗಿದೆ.

ಒತ್ತಡವನ್ನು ಪುದೀನಾ ಕಡಿಮೆ ಮಾಡುತ್ತದೆ ಹಾಗೂ ದೇಹ, ಮನಸ್ಸನ್ನು ರಿಫ್ರೆಂಶ್ ಮಾಡುತ್ತದೆ. ಇದು ರಕ್ತದಲ್ಲಿನ ಕಾರ್ಟಿಸೋಲ್ ಮಟ್ಟವನ್ನು ನಿಯಂತ್ರಿಸುವುದಕ್ಕೂ ಸಹಾಯ ಮಾಡುತ್ತದೆ.

ಬಾಯಿಯ ಆರೈಕೆ ಪುದೀನಾ ಎಲೆಗಳನ್ನು ಜಗಿಯುವುದರಿಂದ ಬಾಯಿಯ ಸ್ವಚ್ಛತೆ ಮತ್ತು ಹಲ್ಲಿನ ಆರೋಗ್ಯವನ್ನು ಸುಧಾರಿಸಲು ಉತ್ತಮ ಮಾರ್ಗವಾಗಿದೆ. ಜತೆಗೆ ಇದು ಆರೋಗ್ಯಕರ ಒಸಡುಗಳು ಮತ್ತು ಹಲ್ಲುಗಳನ್ನು ಪಡೆಯಲು ಸಹಾಯ ಮಾಡುತ್ತದೆ.

ಚರ್ಮದ ಆರೈಕೆಯಲ್ಲಿ ಪುದೀನಾ ಉರಿಯೂತ, ಬ್ಯಾಕ್ಟಿರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಚರ್ಮದ ಆರೈಕೆಗೆ ಇದು ಸಹಕಾರಿ, ಮೊಡವೆಗೆ ಚಿಕಿತ್ಸೆ ನೀಡಲು ಇದು ಉತ್ತಮ. ಇದು ಸ್ಕಿನ್ ಕ್ಲನ್ಸರ್ ಆಗಿಯೂ ಕಾರ್ಯನಿರ್ವಹಿಸುತ್ತದೆ.

- Advertisement -

Related news

error: Content is protected !!