Saturday, May 18, 2024
spot_imgspot_img
spot_imgspot_img

ಪುರುಷರನ್ನೇ ಮೀರಿಸಿ ಟ್ಯಾಂಕರ್‌ ಡ್ರೈವಿಂಗ್‌ ಮಾಡುವ 24 ವರ್ಷದ ಯುವತಿ

- Advertisement -G L Acharya panikkar
- Advertisement -

ಕೇರಳ: ತ್ರಿಶೂರ್ ಜಿಲ್ಲೆಯ 24 ವರ್ಷದ ಯುವತಿಯೋರ್ವಳು ಟ್ಯಾಂಕರ್ ಚಾಲಕರಾಗಿ ದುಡಿಯುತ್ತಿದ್ದು, ಇದೀಗ ಭಾರೀ ಸುದ್ದಿಯಾಗಿದ್ದಾರೆ.

ಡೆಲಿಶಾ ಡೇವಿಸ್ ಎಂಬ 24 ವರ್ಷದ ಯುವತಿ ಕಳೆದ ಮೂರು ವರ್ಷಗಳಿಂದ ಟ್ಯಾಂಕರ್ ಚಾಲನೆ ಮಾಡುತ್ತಿದ್ದಾರೆ.

ಎಂಕಾಂ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಡೆಲಿಶಾ ಟ್ಯಾಂಕರ್ ಚಾಲನೆಯನ್ನು ಹವ್ಯಾಸ ಮಾಡಿಕೊಂಡಿದ್ದಾರೆ.ಇದಕ್ಕೆ ಬೇಕಾದ ಘನ ವಾಹನಗಳ ಚಲಾವಣೆ ಕುರಿತ ಪರವಾನಗಿಯನ್ನು ಅವರು ಪಡೆದಿದ್ದಾರೆ. ಡೆಲಿಶಾ ಡೇವಿಸ್ ಚಿಕ್ಕ ವಯಸ್ಸಿನಿಂದಲೇ ಡ್ರೈವಿಂಗ್ ಬಗ್ಗೆ ಉತ್ಸಾಹ ಹೊಂದಿದ್ದರು. ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರ ವಾಹನ ಚಾಲನೆಯನ್ನು ಕಲಿತ ನಂತರ ಅವರು ಹುಮ್ಮಸ್ಸಿನಿಂದ ಘನ ವಾಹನ ಚಾಲನೆ ಪರವಾನಿಗೆ ಪಡೆದಿದ್ದಾರೆ. ಡೆಲಿಶಾಳ ತಂದೆ ಕೂಡ ಕಳೆದ 42 ವರ್ಷಗಳಿಂದ ಇಂಧನ ಟ್ಯಾಂಕರ್ ಚಾಲನೆ ಮಾಡುತ್ತಿದ್ದು, ಇದು ಡೆಲೀಶಾಗೆ ವಾಹನ ಕಲಿಯುವುದಕ್ಕೆ ಮತ್ತಷ್ಟು ಸಹಕಾರಿಯಾಗಿದೆ.

ಈ ಬಗ್ಗೆ ಮಾತನಾಡಿದ ಡೆಲಿಶಾ, ವಾಣಿಜ್ಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ನಾನು, ನನ್ನ ತಂದೆ ಡೇವಿಸ್ ಪಿವಿ ಅವರಿಂದ ಡ್ರೈವಿಂಗ್ ಪಾಠಗಳನ್ನು ಕಲಿತೆ. ದ್ವಿಚಕ್ರ, ನಾಲ್ಕು ಚಕ್ರ ಮತ್ತು ಆರು ಚಕ್ರದ ವಾಹನಗಳಿಗೆ ಪರವಾನಗಿಗಳನ್ನು ಹೊಂದಿದ್ದೇನೆ. ಕೇರಳದಲ್ಲಿ ಪ್ರಸ್ತುತ ಅಪಾಯಕಾರಿ ವಾಹನ ಚಲಾಯಿಸಲು ಪರವಾನಗಿ ಹೊಂದಿರುವ ನನ್ನ ಹೊರತುಪಡಿಸಿ ಯಾವುದೇ ಮಹಿಳೆ ಇದ್ದಾರೆಯೇ ಎಂದು ನನಗೆ ತಿಳಿದಿಲ್ಲ.ನನಗೆ ಬಾಲ್ಯದಿಂದಲೂ ವಾಹನಗಳ ಹುಚ್ಚು, ನನಗೆ ಇಬ್ಬರು ಸಹೋದರಿಯರಿದ್ದಾರೆ ಮತ್ತು ಅವರಿಗೆ ಯಾವುದೇ ಆಸಕ್ತಿಯಿಲ್ಲ ಎಂದು ಹೇಳಿದ್ದಾರೆ.

- Advertisement -

Related news

error: Content is protected !!