Monday, June 22, 2026
spot_imgspot_img
spot_imgspot_img

ಮಂಗಳೂರು: ಬೈಕಿನಿಂದ ಬಿದ್ದು ಸಹಸವಾರೆ ಮೃತ್ಯು

- Advertisement -
- Advertisement -
This image has an empty alt attribute; its file name is VC_PUC_-1-819x1024.jpg

ಮಂಗಳೂರು: ಸಹಸವಾರೆ ಮಹಿಳೆಯೊಬ್ಬರು ಬೈಕಿನಿಂದ ಬಿದ್ದು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಗೋರಿಗುಡ್ಡ ನಿವಾಸಿ ಕವಿತಾ (30) ಮೃತ ಮಹಿಳೆ.

ಬುಧವಾರ ರಾತ್ರಿ ಅಭಿಷೇಕ್‌ ಎಂಬವರು ಕವಿತಾ ಹಾಗೂ ನವ್ಯಾ (15) ಅವರನ್ನು ಪಲ್ಸರ್‌ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಬಂದು ಗೋರಿಗುಡ್ಡ ವೆಲೆನ್ಸಿಯಾ ಚರ್ಚ್‌ ರಸ್ತೆಯಲ್ಲಿರುವ ತರಕಾರಿ ಅಂಗಡಿಯಿಂದ ಎಳನೀರು ಖರೀದಿಸಿದ್ದರು. ಬಳಿಕ ಅಲ್ಲಿಂದ ಹಿಂತಿರುಗಿ ಮನೆಯ ಕಡೆಗೆ ಹೋಗುತ್ತಿದ್ದಾಗ ಕವಿತಾ ರಸ್ತೆಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಕದ್ರಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Related news

error: Content is protected !!