Friday, March 29, 2024
spot_imgspot_img
spot_imgspot_img

ಪೂಜೆ ಮುಗಿಸಿ ಬರುತ್ತಿದ್ದ ವೇಳೆ ಕಾಳಿಸ್ವಾಮಿ ಮುಖಕ್ಕೆ ಮಸಿ ಬಳಿದ ಕನ್ನಡ ಸಂಘಟನೆ ಕಾರ್ಯಕರ್ತರು

- Advertisement -G L Acharya panikkar
- Advertisement -

ಬೆಂಗಳೂರು : ದೇವಾಲಯದಲ್ಲಿ ಪೂಜೆ ಮುಗಿಸಿ ಹೊರಬರುತ್ತಿದ್ದ ಕಾಳಿ ಸ್ವಾಮಿಗೆ ಗುಂಪೊಂದು ಏಕಾಏಕಿ ಮಸಿ ಬಳಿದಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ. ಕಾಳಿಕಾ ಸೇನೆಯ ವತಿಯಿಂದ ಮಲ್ಲೇಶ್ವರಂನ ಗಂಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಪೂಜೆ ಮುಗಿಸಿ ಕಾಳಿ ಸ್ವಾಮಿ ಹೊರಬರುತ್ತಿದ್ದರು. ಈ ವೇಳೆ ಅವರಿಗೆ ಎದುರಾದ ಗುಂಪೊಂದು ಏಕಾಏಕಿ ಮಸಿ ಬಳಿದಿದೆ.

ಗಂಗಮ್ಮ ದೇವಾಲಯದಲ್ಲಿ ಪೂಜೆ ಇತ್ತು. ಪೂಜೆ ಬಹಳ ಚೆನ್ನಾಗಿ ಆಯ್ತು, ನನಗೆ ಬಹಳ ಖುಷಿಯೂ ಆಯ್ತು. ಪೂಜೆ ಮುಗಿಸಿ ಹೊರ ಬರುವ ವೇಳೆ ಕೆಲವರು ಬಂದು, `ನೀವು ಕುವೆಂಪು ಅವರನ್ನು ಮತ್ತು ಕನ್ನಡಪಡೆಗಳನ್ನು ನಿಂದಿಸಿದ್ದೀರಾ’ ಎಂದು ನನ್ನ ಬಳಿ ಜಗಳ ತೆಗೆದರು. ನಂತರ ಮುಖಕ್ಕೆ ಕಪ್ಪು ಮಸಿ ಬಳಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕುವೆಂಪು ಅವರು ಮತ್ತು ಕನ್ನಡಪಡೆಗಳನ್ನು ನಾನು ಯಾವತ್ತಿಗೂ ನಿಂದಿಸಿಲ್ಲ. ನಿಮ್ಮ ಬಳಿ ದಾಖಲೆಗಳಿದ್ದರೆ ಅದನ್ನು ತೋರಿಸಬೇಕು. ಅದನ್ನು ಬಿಟ್ಟು ಏಕಾಏಕಿ ಕಪ್ಪು ಮಸಿ ಬಳಿದರೆ? ನಾನು ನನ್ನನ್ನು ಕನ್ನಡಿಯಲ್ಲಿ ನೋಡಿಕೊಂಡಾಗ ಬಹಳ ಖುಷಿ ಆಯ್ತು. ನೀವು ಮಸಿ ಬಳಿಯುವ ಮೂಲಕ ಕಾಳಿಯ ರುದ್ರಾವತಾರ ತೋರಿಸಿದ್ದೀರಿ. ಕಾಳಿ ಇರೋದೆ ಕಪ್ಪು, ಅದನ್ನು ನೀವು ನನಗೆ ಹಾಕಿದ್ದೀರಾ ಅಷ್ಟೇ ಎಂದು ಕೃತ್ಯ ಎಸಗಿದವರಿಗೆ ಚಾಟಿ ಬೀಸಿದ್ದಾರೆ.

ಇದನ್ನು ನಾನು ಮಸಿ ಎಂದು ತಿಳಿದುಕೊಳ್ಳುತ್ತಿಲ್ಲ. ಇದನ್ನು ಒಂದು ಮೆಟ್ಟಿಲು ಎಂದು ತಿಳಿದುಕೊಳ್ಳುತ್ತೇನೆ. ನಮ್ಮ ಹೋರಾಟದ ದಿಕ್ಕು ವೇಗವಾಗಿ ನುಗ್ಗಿದ್ದರಿಂದ ನಿಮಗೆಲ್ಲ ಆತಂಕವಾಗಿದೆ. ಖುಷಿ ಆಗಿದೆಯಾ ನಿಮಗೆಲ್ಲ? ಮಸಿ ಬಳಿದವರು ಯಾರೋ ಹಿಂದೂಗಳಂತೆ. ಈಗ ಖುಷಿ ಮುಸ್ಲಿಮರಿಗೆ ಅಲ್ವ? ಮಸಿ ಹಾಕಿರೋ ಎಡಚರು ಖುಷಿ ಪಡಬೇಡಿ. ಇದರಿಂದ ನನಗೂ ಖುಷಿ ಆಗಿದೆ. ನೀವು ನನ್ನ ಮೇಲೆ ಮಸಿ ಹಾಕ್ತಿದ್ದೀರಾ ಅಂದರೆ, ನಿಮ್ಮನ್ನು ನಾನು ತಲುಪಿದ್ದೀನಿ ಎಂದರ್ಥ ಎಂದು ತಿಳಿಸಿದ್ದಾರೆ.

ಕೈಯಲ್ಲಿ ಆಗದೆ ಮಸಿ ಬಳಿಯುತ್ತೀರಾ? ನಿಮಗೆ ಧಮ್ ಇದ್ರೆ ನಾನು ಕುವೆಂಪು ಅವರನ್ನು ಕನ್ನಡಪಡೆಗಳನ್ನು ನಿಂದಿಸಿದ್ದನ್ನು ನ್ಯಾಯಾಲಯದಲ್ಲಿ ಸಾಬೀತು ಮಾಡಿ. ನೀವು ಗಂಡಸರಾಗಿದೆ ಎಂದು ಸವಾಲು ಹಾಕಿದ್ದಾರೆ.

- Advertisement -

Related news

error: Content is protected !!