Sunday, June 14, 2026
spot_imgspot_img
spot_imgspot_img

ಹಾವು ಕಡಿದು ಎಂಬಿಬಿಎಸ್ ವಿದ್ಯಾರ್ಥಿ ಮೃತ್ಯು..!

- Advertisement -
- Advertisement -

ಡಾಕ್ಟರ್ ಪದವಿ ಪಡೆದ ವಿದ್ಯಾರ್ಥಿ ಹಾವು ಕಡಿದು ಸಾವನ್ನಪ್ಪಿದ ಘಟನೆ ತುಮಕೂರು ನಗರದಲ್ಲಿ ನಡೆದಿದೆ.

ಸಾವನ್ನಪ್ಪಿದ ವಿದ್ಯಾರ್ಥಿ ಕೇರಳ ಮೂಲದ ಅದಿತ್ ಬಾಲಕೃಷ್ಣನ್ ಎಂದು ಗುರುತಿಸಲಾಗಿದೆ.

ನಿನ್ನೆ ಸಾಹೇ ವಿಶ್ವ ವಿದ್ಯಾಲಯ ಘಟಿಕೋತ್ಸವದಲ್ಲಿ ಅದಿತ್ ಬಾಲಕೃಷ್ಣನ್ ಪದವಿ ಪಡೆದಿದ್ದನು. ಆದರೆ ಸಂಜೆ ಪಾರ್ಕಿನಲ್ಲಿ ಹಾವು ಕಡಿದಿದೆ ಎನ್ನಲಾಗುತ್ತಿದೆ. ಹಾವು ಕಡಿತ ಗಮನಿಸದೇ ಮನೆಗೆ ಬಂದ ಅದಿತ್ ಬಾಲಕೃಷ್ಣನ್ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮೃತನ ಶವ ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!