Wednesday, April 24, 2024
spot_imgspot_img
spot_imgspot_img

ಪೋಕ್ಸೊ ಕಾಯ್ದೆಯಡಿಯಲ್ಲಿ ಬಂಧಿತನಾದ ಆರೋಪಿ ಜಾಮೀನು ಅರ್ಜಿ ಸಲ್ಲಿಸಿದರೆ ಸಂತ್ರಸ್ತರಿಗೆ ಮಾಹಿತಿ ನೀಡುವುದು ಕಡ್ಡಾಯವೆಂದ ಹೈಕೋರ್ಟ್‌

- Advertisement -G L Acharya panikkar
- Advertisement -
vtv vitla
vtv vitla

ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪೋಕ್ಸೊ ಕಾಯ್ದೆಯಡಿ ಬಂಧಿತನಾಗಿರುವ ಆರೋಪಿ ಜಾಮೀನು ಅರ್ಜಿ‌ ಸಲ್ಲಿಸಿದರೆ, ಈ ಬಗ್ಗೆ ಸಂತ್ರಸ್ತರಿಗೆ ಅಥವಾ ಕೌನ್ಸಿಲ್ ಗೆ ಮಾಹಿತಿ ನೀಡುವುದು ಕಡ್ಡಾಯ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಲಾಖೆಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಇಂತಹ ದೌರ್ಜನ್ಯಕ್ಕೊಳಗಾದ ಮಕ್ಕಳ ತಾಯಂದಿರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ, ಚೀಫ್ ಜಸ್ಟೀಸ್ ರಿತುರಾಜ್ ಅವಸ್ಥಿ ಹಾಗೂ ಜಸ್ಟೀಸ್ ಸೂರಜ್ ಗೋವಿಂದರಾಜ್ ಅವರ ವಿಭಾಗೀಯ ಪೀಠ ಈ ಮಾರ್ಗಸೂಚಿಯನ್ನು ಹೊರಡಿಸಿದೆ.

ಐಪಿಸಿ ಸೆಕ್ಷನ್ 376(3), 376-AB, 376-DA ಅಥವಾ 376-DB ಅಥವಾ ಪೋಕ್ಸೋ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸಲಾದ ಆರೋಪಿಯು ಜಾಮೀನಿಗೆ ಅರ್ಜಿ ಸಲ್ಲಿಸಿದಾಗ, ತನಿಖಾಧಿಕಾರಿ, ವಿಶೇಷ ಜುವೆನೈಲ್ ಪೊಲೀಸ್ ಘಟಕ (SJPU), ಪಬ್ಲಿಕ್ ಪ್ರಾಸಿಕ್ಯೂಟರ್, ದಾಖಲೆಯಲ್ಲಿರುವ ಯಾವುದೇ ವಕೀಲ ಮತ್ತು ಸಂತ್ರಸ್ತೆ/ದೂರುದಾರ/ಮಾಹಿತಿದಾರರಿಗೆ, ಆರೋಪಿಯಿಂದ ನೋಟಿಸ್ ನೀಡಬೇಕು ಎಂದು ಆದೇಶ ನೀಡಿದೆ.

ಸಂಬಂಧಪಟ್ಟ ತನಿಖಾಧಿಕಾರಿ ಅಥವಾ SJPU ಆರೋಪಿಯು ಜಾಮೀನು ಅರ್ಜಿ ಸಲ್ಲಿಸಿರುವ ಬಗ್ಗೆ ಸಂತ್ರಸ್ತರ ಕೌನ್ಸಿಲ್ ಅಥವಾ ಪೋಷಕರಿಗೆ ಮಾಹಿತಿ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

- Advertisement -

Related news

error: Content is protected !!