Sunday, June 29, 2025
spot_imgspot_img
spot_imgspot_img

ಪ್ರಧಾನಿ ಮೋದಿಗೆ ಮಾಜಿ ಐಐಟಿ ವಿದ್ಯಾರ್ಥಿಯಿಂದ ಇ-ಮೇಲ್ ಮೂಲಕ ಬೆದರಿಕೆ

- Advertisement -
- Advertisement -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಗುಜರಾತ್ ಭಯೋತ್ಪಾದಕ ನಿಗ್ರಹ
ದಳ (ಎಟಿಎಸ್) ಮಾಜಿ ಐಐಟಿ ವಿದ್ಯಾರ್ಥಿಯನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ.

ಬಂಧಿತ ಯುವಕನನ್ನು ಅಮಾನ್ ಸಕ್ಸೇನಾ (28) ಎಂದು ಗುರುತಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಕ್ಸೇನಾ
ಬೆದರಿಕೆಯೊಡ್ಡಿ ಇ-ಮೇಲ್ ಮಾಡಿದ್ದ. ಈ ಆರೋಪದಲ್ಲಿ ಉತ್ತರಪ್ರದೇಶದ ಬುದೌನ್ ಜಿಲ್ಲೆಯಲ್ಲಿರುವ ತಂದೆಯ ಮನೆಯಲ್ಲಿದ್ದ
ಸಕ್ಸೇನಾನನ್ನು ಗುಜರಾತ್ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದರು.

ಗುಜರಾತ್‌ನ ಭಯೋತ್ಪಾದಕ ನಿಗ್ರಹ ದಳ ಮತ್ತು ಉತ್ತರಪ್ರದೇಶ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ, ಸಕ್ಸೇನಾನನ್ನು
ಬಂಧಿಸಲಾಗಿತ್ತು. ಪ್ರಧಾನಿ ಮೋದಿ ಅವರಿಗೆ ಇ-ಮೇಲ್ ಮೂಲಕ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಸಕ್ಸೇನಾ ಹಾಗೂ ಗುಜರಾತ್
ಮೂಲದ ಮಹಿಳೆ ಮತ್ತು ಆಕೆಯ ದೆಹಲಿ ಮೂಲದ ಗೆಳೆಯನ ವಿರುದ್ಧ ದೂರು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!