Tuesday, April 30, 2024
spot_imgspot_img
spot_imgspot_img

ಪ್ರವೀಣ್ ನೆಟ್ಟಾರು ಹತ್ಯೆ..! ಪೊಲೀಸರ ತನಿಖೆಯಲ್ಲಿ ಹೊರಬಿತ್ತು ಹಂತಕ ಸ್ಪೋಟಕ ಸಂಚು..? ಹಿಂದೂ ಕಾರ್ಯಕರ್ತರ ಕೊಲೆಗೆ ರೂಪುಗೊಳ್ಳುತ್ತಿದೆಯಾ ಐಸಿಸ್ ಮಾದರಿಯ ಪಡೆ?

- Advertisement -G L Acharya panikkar
- Advertisement -

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪೊಲೀಸ್‌ ಇಲಾಖೆಗೆ ಅತೀ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಾಕ್ಷ್ಯ ಸುಳಿವುಗಳ ಕೊರತೆ ತನಿಖೆಯ ವೇಗವನ್ನು ಕುಂಠಿತಗೊಳಿಸಿತ್ತು ಅಂದರೂ ತಪ್ಪಗಲಾರದೇನು. ಪೊಲೀಸರ ಪ್ರಾಥಮಿಕ ತನಿಖೆಯಿಂದ ಇದೊಂದು ಅತ್ಯಂತ ವ್ಯವಸ್ಥಿತ ಹತ್ಯೆ ಎನ್ನುವ ವಿಚಾರ ಬಯಲಾಗಿತ್ತು. ಈ ಪ್ರಕರಣದ ಜಾಡು ಹಿಡಿದ ಪೊಲೀಸರು ಶಂಕಿತ ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ಕೊಲೆ ಪ್ರಕರಣದ ಹಿಂದಿನ ಸ್ಪೋಟಕ ಕಹಾನಿಯೇ ಬಯಲಾಗುತ್ತಿದೆ

ಬಲ್ಲ ಮೂಲಗಳ ಪ್ರಕಾರ, ಐಸಿಸ್ ಮಾದರಿಯ ಟೀಮ್‌ ದೇಶದಾದ್ಯಂತ ಆಯಕಟ್ಟಿನ ಸ್ಥಳಗಳಲ್ಲಿ ಸದ್ದಿಲ್ಲದೇ ಜಾಲ ವಿಸ್ತರಿಸುತ್ತಿದೆ. ಸ್ಥಳೀಯ ಮತೀಯ ಸಂಘಟನೆಗಳನ್ನು ಬಳಸಿಕೊಂಡೇ ಅದರಲ್ಲಿನ ದಕ್ಷ ಹಾಗೂ ಕಟ್ಟ ರ್ ವಾದಿಗಳನ್ನು ಆಯ್ಕೆ ಮಾಡಿ ಅವರಿಗೆ ಸೈನ್ಯದ ಮಾದರಿಯಲ್ಲೇ ತರಬೇತಿ ನೀಡಲಾಗುತ್ತದೆ ಎನ್ನುವ ಆಘಾತಕಾರಿ ಅಂಶ ತಿಳಿದುಬಂದಿದೆ. ಪೊಲೀಸ್ ಮೂಲಗಳ ಪ್ರಕಾರ ಪ್ರವೀಣ್ ನೆಟ್ಟಾರು ಕೊಲೆಗೆ ಅತ್ಯಂತ ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿತ್ತು . ಐಸಿಸ್‌ ಮಾದರಿಯಲ್ಲೇ ಗುರಿ ನಿಗದಿಪಡಿಸಿ ಈ ಹತ್ಯೆ ನಡೆದಿದ್ದು , ಈ ಕೃತ್ಯದಲ್ಲಿ ಸ್ಥಳೀಯ ಪಿಎಫ್ಐ ಕಾರ್ಯಕರ್ತರ ಕೈವಾಡವಿಯೇ ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಯಲಾಗಿತ್ತು.

ಸ್ಥಳೀಯ ಯುವಕರ ಪಡೆಯನ್ನೇ ಕಟ್ಟಿಕೊಂಡು ಇಂತಹ ಹತ್ಯೆಗಳಿಗೆ ಭಯಾನಕ ತಂತ್ರ ರೂಪಿಸಲಾಗುತ್ತದೆ. ಅಲ್ಲದೇ ಪ್ರವೀಣ್ ಹತ್ಯೆಯಲ್ಲಿ ಕೇರಳ ನೋಂದಣಿಯ ಬೈಕ್ ಬಳಸಿ ತನಿಖೆಯ ದಿಕ್ಕು ತಪ್ಪಿಸಲು ನಡೆಸಿದ ತಂತ್ರಗಾರಿಕೆ ಎನ್ನುವುದು ಕೂಡ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಎರಡು ತಂಡಗಳಲ್ಲಿ ನಡೆಯುವ ವ್ಯವಸ್ಥಿತ ಕಾರ್ಯತಂತ್ರ..?
ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಹತ್ಯೆಗೈಯ್ಯುವ ಸಂಚು ಅತ್ಯಂತ ಭಯಾನಕವಾಗಿದೆ. ಒಬ್ಬ ಹಿಂದೂ ಸಂಘಟನೆಯ ಕಾರ್ಯಕರ್ತನ ಹತ್ಯೆಗೆ ಎರಡು ತಂಡಗಳಿಗೆ ಜವಾಬ್ದಾರಿ ನೀಡಲಾಗುತ್ತದೆ. ಪಮುಖವಾಗಿ ಈ ಎರಡೂ ತಂಡಗಳ ಸದಸ್ಯರು ಸ್ಥಳೀಯರೇ ಆಗಿರುತ್ತಾರೆ. ಒಂದು ತಂಡ ಸಭ್ಯ ನಾಗರಿಕರಂತೆ ಓಡಾಡಿಕೊಂಡು ವ್ಯಕ್ತಿಯ ಜತೆ ನಿಕಟ ಸಂಪರ್ಕವಿಟ್ಟುಕೊಂಡೇ ಆತನ ಚಲನವಲನಗಳ ಮಾಹಿತಿ ಕಲೆಹಾಕಿ ಇನ್ನೊಂದು ತಂಡಕ್ಕೆ ರವಾನಿಸುತ್ತದೆ. ಇದಕ್ಕೂ ಮುನ್ನ ಪೊಲೀಸರ ಓಡಾಟ ಇದೆಯೇ, ಸುತ್ತಲಿನ ಸಿಸಿ ಕ್ಯಾಮರಾ ಇದಯ್ ತಪ್ಪಿಸಿಕೊಳ್ಳಲು ಸರಿಯಾದ ಸಮಯ ನೋಡಿಕೊಂಡು ಆತನ ಚಲನವಲನದ ಮಾಹಿತಿ ಖಚಿತವಾದ ಮೇಲೆ ಎರಡನೇ ತಂಡ ಹತ್ಯೆಗೈದು ಪರಾರಿಯಾಗುತ್ತದೆ ಎನ್ನುವ ಆಘಾತಕಾರಿ ಮಾಹಿತಿ ತನಿಖೆಯಿಂದ ಬಯಲಾಗಿದೆ.

ಮೊಬೈಲ್ ಮಿತ ಬಳಕೆ..! ವಾಟ್ಸಾಪ್‌ನಲ್ಲೇ ಡೀಲ್‌..?!
ಎಲ್ಲೂ ಸಿಕ್ಕಿ ಹಾಕಿಕೊಳ್ಳದ ಹಾಗೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಕಾರ್ಯಚರಿಸುವ ಈ ತಂಡಗಳು ವಾಟ್ಸಾಪ್‌ನಲ್ಲೇ ಡೀಲ್ ಮಾಡುತ್ತದೆ. ಸಾಮಾನ್ಯವಾಗಿ ಮೊಬೈಲ್ ಕರೆ ಮಾಡಿದರೆ ಅದರಿಂದ ಕರೆಯ ಸಂಪೂರ್ಣ ಮಾಹಿತಿ ಪೊಲೀಸರಿಗೆ ಸಿಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಇವರು ಪರಸ್ಪರ ವಾಟ್ಸಾಪ್ ಮೂಲಕವೇ ಸಂವಹನ ನಡೆಸುತ್ತಾರೆ ಎನ್ನುವ ಅಂಶ ಬಯಲಾಗಿದೆ. ವಾಟ್ಸಾಪ್ ಸೇವೆಯಲ್ಲಿ ಎಲ್ಲಾ ಮೆಸೇಜ್‌ಗಳು ಹಾಗೂ ಕರೆಗಳು end to end encryption ಇರೋದರಿಂದ ಯಾವ ಭದ್ರತಾ ಸಂಸ್ಥೆಗಳಿಗೂ ಕೂಡ ಪತ್ತೆಹಚ್ಚಲು ಅಸಾಧ್ಯವಾಗಿದೆ.

ಪ್ರವೀಣ್ ಹತ್ಯೆಯ ಬೆನ್ನಲ್ಲೇ ಕರಾವಳಿಯಲ್ಲಿ ಇನ್ನಷ್ಟು ಹಿಂದೂ ನಾಯಕರ ಹತ್ಯೆಗೆ ಪ್ಲಾನ್ ರೂಪಿಸಲಾಗುತ್ತಿದೆ ಎನ್ನುವ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿದೆ.

- Advertisement -

Related news

error: Content is protected !!