Thursday, July 10, 2025
spot_imgspot_img
spot_imgspot_img

ಪ್ರಾರ್ಥನಾ ಕೇಂದ್ರ ಧ್ವಂಸ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..! ಅಂಗನವಾಡಿ ಇದ್ದ ಕಟ್ಟಡ ಹೇಗೆ ಪ್ರಾರ್ಥನಾಲಯವಾಯಿತು..?

- Advertisement -
- Advertisement -

ಮಂಗಳೂರು: ಮಂಗಳೂರು ಹೊರವಲಯದ ಕೂಳೂರು ಸಮೀಪದ ಪಂಜಿಮೊಗರು-ಉರುಂದಾಡಿ ಗುಡ್ಡೆ ಎಂಬಲ್ಲಿ ಫೆಬ್ರವರಿ 5 ರಂದು ಸೈಂಟ್ ಆ್ಯಂಟನಿ ಹೋಲಿ ಕ್ರಾಸ್ ಪ್ರಾರ್ಥನಾ ಕೇಂದ್ರವನ್ನು ಧ್ವಂಸಗೊಳಿಸಿದ ಘಟನೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈ ಹಿಂದೆಯೂ ಈ ಬಗ್ಗೆ ವರದಿ ಪ್ರಕಟವಾಗಿತ್ತು..!

ಇದನ್ನೂ ಓದಿ: http://bit.ly/3JFwPwm

ಮಂಗಳೂರು ನಗರದ ಪಂಜಿಮೊಗರು ವಾರ್ಡ್ನ ಉರುಂದಾಡಿ ಎಂಬಲ್ಲಿ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಅಂಗನವಾಡಿ ಕೇಂದ್ರದ ಹೊರ ಗೋಡೆಗೆ ಪ್ರಾರ್ಥನಾ ಮಂದಿರದ ಬ್ಯಾನರ್ ಅಳವಡಿಸಿದ್ದು, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು.

2005 ರಲ್ಲಿ ಶಿಶುಕಲ್ಯಾಣ ಇಲಾಖೆಯಿಂದ ಜಾಗ ಮಂಜೂರು ಆಗಿತ್ತು. ಕಳೆದ ಬಾರಿ ಅಂದರೆ 2021ರ ಮೇ ತಿಂಗಳಿನಲ್ಲಿ ಅಂಗನವಾಡಿ ಅಭಿವೃದ್ಧಿಗೆ 16.50 ಲಕ್ಷ ರೂಪಾಯಿ ಹಣ ಮಂಜೂರು ಆಗಿತ್ತು. ಹೀಗಾಗಿ ಸ್ಥಳ ಪರಿಶೀಲನೆಗಾಗಿ ಅಧಿಕಾರಿಗಳು ಬಂದಿದ್ದಾರೆ. ಈ ವೇಳೆ ಈ ಜಾಗ ಸರ್ಕಾರಿ ಜಾಗ ಎಂಬುವುದು ಖಾತರಿ ಆಗಿದೆ. ಆದರೂ ಸಹ ಅಲ್ಲಿನ ಕ್ರಿಶ್ಚಿಯನ್ ಶಿಕ್ಷಕಿ ಜೆಸಿಂತಾ ಪಟ್ಟು ಬಿಡದೆ ಶಿಕ್ಷಣ ಕೇಂದ್ರವನ್ನು ಪ್ರಾರ್ಥನಾ ಕೇಂದ್ರವನ್ನಾಗಿಸಲು ಹುನ್ನಾರ ಹೂಡಿರುವುದು ಮೇಲ್ನೋಟಕ್ಕೆ ಕಂಡುಬರುವ ಸತ್ಯ ಎಂಬುದು ಸ್ಥಳೀಯರ ಆರೋಪ.

ಶೈಕ್ಷಣಿಕ ಕೇಂದ್ರವನ್ನು ಮತಾಂತರ ಕೇಂದ್ರವನ್ನಾಗಿಸಲು ಪ್ರಯತ್ನಿಸಿ, ಸಮಾಜದಲ್ಲಿ ಕೋಮು ಸಾಮರಸ್ಯ ಕದಡುತ್ತಿರುವ ಶಿಕ್ಷಕೀಯು ಅಂಗನವಾಡಿ ಕೇಂದ್ರಕ್ಕೆ ಬರುತ್ತಿದ್ದ ಆಹಾರ ಪದಾರ್ಥ ಗಳನ್ನು ಫಲಾನುಭವಿಗಳಿಗೆ ನೀಡದಿರುದು ಕೂಡ ಸ್ಥಳೀಯರಲ್ಲಿ ಆಕ್ರೋಶವನ್ನು ಹೆಚ್ಚಿಸಲು ಕಾರಣವಾಗಿದೆ ಎಂಬ ಆರೋಪ ಅಲ್ಇನ ಸ್ಥಳೀಯರದ್ದು.

ಅಂಗನವಾಡಿ ಕಟ್ಟಡ ದ್ವಂಸವಾಗಿರುವ ಬಗ್ಗೆ ಪೊಲೀಸರು ಈಗಾಗಲೇ ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂಬ ಪ್ರಕರಣ ಒಂದೆಡೆಯಾದರೆ, ದ್ವಂಸವಾದ ಅಂಗನವಾಡಿ ಕೇಂದ್ರದ ಕಟ್ಟಡ ಸರಕಾರಿ ಜಾಗದಲ್ಲಿರುತ್ತದೆ. ಆದರೆ ಅಲ್ಲಿನ ಶಿಕ್ಷಕಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದರಿಂದ ಅದನ್ನೇ ಬಂಡವಾಳವಾಗಿರಿಸಿಕೊಂಡ ಮತಾಂದ ಕ್ರಿಶ್ಚಿಯನ್ ಮಿಷನರಿಗಳು ಅಂಗನವಾಡಿ ಕೇಂದ್ರ ವನ್ನು ಕ್ರಿಶ್ಚಿಯನ್ ಪ್ರಾರ್ಥನ ಮಂದಿರ ಎಂದು ಅಪಪ್ರಚಾರ ಮಾಡಿ ಸಮಾಜದಲ್ಲಿ ಸಿಂಪತಿಯನ್ನು ಪಡೆದುಕೊಂಡು ಭೂಕಬಳಿಕೆ ಮಾಡುವ ಹುನ್ನಾರವಾಗಿರುತ್ತದೆ ಎಂಬ ನೇರ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಈ ಷಡ್ಯಂತರವನ್ನು ಸ್ಥಳೀಯರು ವಿರೋಧಿಸಿ ಅಂಗನವಾಡಿ ಕೇಂದ್ರ ವನ್ನು ನಿರ್ಮಿಸಲು ಸರಕಾರವನ್ನು ಆಗ್ರಹಿಸಿದ್ದಾರೆ.

- Advertisement -

Related news

error: Content is protected !!