Saturday, April 20, 2024
spot_imgspot_img
spot_imgspot_img

ಪ್ರೀತಿಗೋಸ್ಕರ ಸ್ವ-ಧರ್ಮವನ್ನು ತ್ಯಜಿಸಿ ಹಿಂದೂ ಯುವಕನ ಕೈ ಹಿಡಿದ ಯುವತಿ

- Advertisement -G L Acharya panikkar
- Advertisement -

ಲವ್ ಜಿಹಾದ್ ಹೆಸರಿನಲ್ಲಿ ಯುವತಿಯರ ಧರ್ಮ ಬದಲಾವಣೆ ಮಾಡುವಂತಹ ಅನೇಕ ಹೇಯ ಘಟನೆಗಳು ನಮ್ಮ ಕಣ್ಮುಂದೆ ನಡೆದು ಹೋಗಿವೆ. ಆದರೆ, ನಿಜವಾದ ಪ್ರೀತಿಯಲ್ಲಿ ಇವೆಲ್ಲದಕ್ಕೂ ಜಾಗ ಇರಲ್ಲ ಎಂಬುದನ್ನು ಮಧ್ಯಪ್ರದೇಶದ ಜೋಡಿವೊಂದು ತೋರಿಸಿಕೊಟ್ಟಿದೆ.

ತಾನು ಪ್ರೀತಿಸುತ್ತಿದ್ದ ಯುವಕನೋರ್ವನ ಕೈ ಹಿಡಿಯುವ ಉದ್ದೇಶದಿಂದ ಯುವತಿಯೋರ್ವಳು ಮುಸ್ಲಿಂ ಧರ್ಮ ಬಿಟ್ಟು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಮಧ್ಯಪ್ರದೇಶದ ಮಂದಸೌರ್​​ನಲ್ಲಿ ಈ ಘಟನೆ ನಡೆದಿದೆ. ರಾಜಸ್ಥಾನದ ಜೋಧಪುರದಲ್ಲಿ ವಾಸವಾಗಿದ್ದ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ, ಇಬ್ಬರ ನಡುವೆ ಧರ್ಮ ಅಡ್ಡಿ ಬಂದಿದೆ. ಈ ವೇಳೆ, ಮುಸ್ಲಿಂ ಯುವತಿ ಖುದ್ದಾಗಿ ಹಿಂದೂ ಧರ್ಮ ಸ್ವೀಕರಿಸಲು ಮುಂದೆ ಬಂದಿದ್ದಾಳೆ. ಅದರಂತೆ ಚತುರ್ದಶಿ ಸಂದರ್ಭದಲ್ಲಿ ಮಂದಸೌರ್​​ನ ದೇವಾಲಯದಲ್ಲಿ ಅರ್ಚಕರ ಸಮ್ಮುಖದಲ್ಲಿ ಹಿಂದೂ ಧರ್ಮ ಸ್ವೀಕರಿಸಿದ್ದು, ಇದರ ಬೆನ್ನಲ್ಲೇ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮಧ್ಯಪ್ರದೇಶದ ಮಂದಸೌರ್​​ನ ನಿವಾಸಿ ರಾಹುಲ್​ ವರ್ಮಾ ರಾಜಸ್ಥಾನದ ಜೋಧ್​ಪುರದಲ್ಲಿ ವಾಸವಾಗಿದ್ದು, ನೃತ್ಯ ತರಗತಿ ನಡೆಸುತ್ತಾರೆ. ರಾಹುಲ್​ ವಾಸವಾಗಿದ್ದ ಮನೆಯ ಪಕ್ಕದಲ್ಲೇ ಮುಸ್ಲಿಂ ಕುಟುಂಬವೊಂದು ವಾಸವಾಗಿದ್ದು, ಯುವತಿ ಇಕ್ರಾಬಿ ಎಂಬ ಯುವತಿಯ ಜೊತೆ ಪ್ರೇಮಾಂಕುರವಾಗಿದೆ.

ಪರಸ್ಪರ ಪ್ರೀತಿಸಲು ಶುರು ಮಾಡಿರುವ ಈ ಜೋಡಿ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ಇಬ್ಬರ ಧರ್ಮ ಬೇರೆ ಬೇರೆಯಾಗಿದ್ದರಿಂದ ಮದುವೆ ನಡೆಯಲು ಸಾಧ್ಯವಿಲ್ಲ ಎಂದು ರಾಹುಲ್ ಹೇಳಿದ್ದಾರೆ. ಈ ವೇಳೆ ಇಕ್ರಾಬಿ ತನ್ನ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಾಹುಲ್ ತನ್ನ ಕುಟುಂಬದ ಮುಂದೆ ಹೇಳಿಕೊಂಡಿದ್ದು, ಅದಕ್ಕೂ ಸದಸ್ಯರು ಒಪ್ಪಿಕೊಂಡಿದ್ದಾರೆ. ಹೀಗಾಗಿ, ಹಿಂದೂ ಧರ್ಮದ ಪ್ರಕಾರ ಮತಾಂತರ ಕಾರ್ಯ ನಡೆದಿದ್ದು, ಮದುವೆ ಸಹ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮುಸ್ಲಿಂ ಯುವತಿ ಕುಟುಂಬದಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಮದುವೆ ನಡೆದ ನಂತರ ಮಾಧ್ಯಮದ ಮುಂದೆ ಇಕ್ರಾಬಿ ಮಾತನಾಡಿದ್ದು, ಇದು ತನ್ನ ವೈಯಕ್ತಿಕ ನಿರ್ಧಾರ ಇಷ್ಟಪಟ್ಟು ಇಬ್ಬರು ಮದುವೆ ಮಾಡಿಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಮಾಹಿತಿ ಸಹ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಮಧ್ಯಪ್ರದೇಶದ ಅಂಬಾ ಗ್ರಾಮದಲ್ಲಿ ವಾಸವಾಗಿದ್ದ 18 ಮಂದಿ ಮುಸ್ಲಿಂ ಧರ್ಮ ತ್ಯಜಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ನಡೆದಿತ್ತು. ಇವರೆಲ್ಲರೂ ಸ್ವ- ಇಚ್ಛೆಯಿಂದ ಈ ನಿರ್ಧಾರ ಕೈಗೊಂಡಿದ್ದರು.

- Advertisement -

Related news

error: Content is protected !!