Friday, May 3, 2024
spot_imgspot_img
spot_imgspot_img

ಫರಂಗಿಪೇಟೆ: ನಿಂತಿದ್ದ ಕಾರುಗಳಿಗೆ ಮತ್ತೊಂದು ಕಾರು ಢಿಕ್ಕಿ

- Advertisement -G L Acharya panikkar
- Advertisement -

ಫರಂಗಿಪೇಟೆ: ಫರಂಗಿಪೇಟೆಯ ಕಾಂತಪ್ಪ ಪೂಂಜ ಸಂಕೀರ್ಣ ಎದುರು ನಿಂತಿದ್ದ ಎರಡು ಕಾರುಗಳಿಗೆ ವೋಕ್ಸ್ ವೆಗಾನ್ ಕಾರು ಢಿಕ್ಕಿ ಹೊಡೆದ ಪರಿಣಾಮ ಮೂರು ಕಾರುಗಳು ಕೂಡ ಜಖಂಗೊಂಡಿದೆ.

ಬಿ.ಸಿ.ರೋಡು ಕಡೆಯಿಂದ ಅತಿ ವೇಗದಲ್ಲಿ ಬಂದ ಕಾರು, ಚಾಲಕನ ನಿಯಂತ್ರಣ ಕಳೆದುಕೊಂಡು ಫರಂಗಿಪೇಟೆಯಲ್ಲಿ ಹೆದ್ದಾರಿ ಬದಿ ನಿಲ್ಲಿಸಿದ್ದ ಮಾರುತಿ ಆಮ್ನಿ ಮತ್ತು ಮಾರುತಿ ಆಲ್ಟೊ ಕಾರಿಗೆ ಢಿಕ್ಕಿಯಾಗಿದ್ದು, ಅದರಲ್ಲಿ ಒಂದು ಕಾರು ರಿಪೇರಿಗೆ ನಿಲ್ಲಿಸಿದ್ದ ಟಿಪ್ಪರ್ ಗೆ ಢಿಕ್ಕಿಯಾಗಿದೆ.

ಆಮ್ನಿ ಮತ್ತು ಟಿಪ್ಪರ್ ನಡುವೆ ಸಿಲುಕಿದ ಮಾರುತಿ ಆಲ್ಟೊ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

vtv vitla
- Advertisement -

Related news

error: Content is protected !!