Sunday, June 14, 2026
spot_imgspot_img
spot_imgspot_img

ಬಂಟ್ವಾಳ: ಅಭಿವೃದ್ಧಿ ಪರ ಚಿಂತನೆ ಬೇಡ ಎಂಬುದು ಬಿಜೆಪಿಯ ದಿವಾಳಿತನಕ್ಕೆ ಸಾಕ್ಷಿ; ರಮಾನಾಥ ರೈ

- Advertisement -
- Advertisement -
vtv vitla

ಬಂಟ್ವಾಳ: ರಸ್ತೆ , ಮೋರಿ ಮೊದಲಾದ ಅಭಿವೃದ್ಧಿ ಪರ ಚಿಂತನೆಗಳು ಬೇಡ, ಲವ್ ಜಿಹಾದ್ ತಡೆಗಟ್ಟಲು ಬಿಜೆಪಿಗೆ ಮತ ನೀಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡುತ್ತಾರೆ ಎಂದಾದರೆ ಇದು ಬಿಜೆಪಿಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಘಟಕ ಇದರ ವತಿಯಿಂದ ಮಂಗಳವಾರ ಮಾಣಿಯ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮತೀಯವಾದದ ಮೂಲಕ ಜನರನ್ನು ಒಡೆದು ಆಳುವ ನೀತಿಯನ್ನು ಮಾಡುತ್ತಿರುವ ಬಿಜೆಪಿಗೆ ರಾಹುಲ್ ಗಾಂಧಿ ಯವರ ಭಾರತ್ ಜೋಡೋ ಕಾರ್ಯಕ್ರಮವು ಸ್ಪಷ್ಟ ಉತ್ತರವನ್ನು ನೀಡುತ್ತಾ ಬಂದಿದೆ. ಈಗಿದ್ದರೂ ನಾವು ಈ ತರಬೇತಿಯ ಅನುಭವವನ್ನು ಪಡೆದು ಚುನಾವಣಾ ಪ್ರಚಾರ ಕಾರ್ಯದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ನಾಗೇಶ್ ಉದ್ಯಾವರ ಹಾಗೂ ಉಮಾನಾಥ ಶೆಟ್ಟಿ ತರಬೇತಿ ಶಿಬಿರವನ್ನು ನಡೆಸಿಕೊಟ್ಟರು. ಕೆಪಿಸಿಸಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪಿಯೂಸ್ ಎಲ್.ರೋಡ್ರಿಗಸ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ಅಲ್ಪ ಸಂಖ್ಯಾತ ಘಟಕಾದ್ಯಕ್ಷ ಅರ್ಷದ್ ಸರವು, ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲ್ ಪಕ್ಷ ಪ್ರಮುಖರಾದ ಬಿ.ಎಂ.ಅಬ್ಬಾಸ್ ಅಲಿ, ಮುರಳೀಧರ ರೈ, ಕೆ.ಪದ್ಮನಾಭ ರೈ, ಸಂದೇಶ್ ಶೆಟ್ಟಿ ಬಿಕ್ನಾಜೆ ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!