Friday, September 18, 2026
spot_imgspot_img
spot_imgspot_img

ಬಂಟ್ವಾಳ: ಆಟೋ ಗ್ಯಾಸ್ ಸಿಲಿಂಡರ್ ಸ್ಫೋಟ; ಓರ್ವ ಗಂಭೀರ..!

- Advertisement -
- Advertisement -
vtv vitla
vtv vitla

ಬಂಟ್ವಾಳ: ಆಟೋ ಗ್ಯಾಸ್ ಸಿಲಿಂಡರ್ ಅನ್ನು ಕತ್ತರಿಸುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿಯೋರ್ವ ಗಾಯಗೊಂಡಿರುವ ಘಟನೆ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ಎಂಬಲ್ಲಿ ನಡೆದಿದೆ.

ಗಾಯಗೊಂಡವರನ್ನು ಬಂಟ್ವಾಳ ಕಾರಾಜೆ ನಿವಾಸಿ ಅಬ್ದುಲ್ ರಝಾಕ್ (62) ಎನ್ನಲಾಗಿದೆ.

vtv vitla
vtv vitla

ಗುಜರಿ ವ್ಯಾಪಾರಿಯಾದ ಅಮ್ಮೆಮಾರ್ ನಿವಾಸಿ ತಸ್ಲೀಮ್ ಎಂಬವರ ಮನೆಯಲ್ಲಿ ಗುಜರಿಗೆ ಬಂದಿದ್ದ ಆಟೋ ಗ್ಯಾಸ್ ಸಿಲಿಂಡರ್ ಕತ್ತರಿಸಲು ಅಬ್ದುಲ್ ರಝಾಕ್ ಅವರು ಆಟೋ ರಿಕ್ಷಾದಲ್ಲಿ ಬಂದಿದ್ದು ಸಿಲಿಂಡರ್ ಕತ್ತರಿಸುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ ಎನ್ನಲಾಗಿದೆ.

ಘಟನೆಯಿಂದ ಸಿಲಿಂಡರ್ ಕತ್ತರಿಸುತ್ತಿದ್ದ ಅಬ್ದುಲ್ ರಝಾಕ್ ಗಂಭೀರ ಗಾಯಗೊಂಡಿದ್ದು, ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಬಂದಿದ್ದ ಆಟೋ ರಿಕ್ಷಾ ಭಸ್ಮವಾಗಿದ್ದು ಸಮೀಪದ ಮನೆಗಳ ಗೋಡೆಗಳು ಬಿರುಕು ಬಿಟ್ಟಿದೆ. ಅಗ್ನಿಶಾಮಕದಳದ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.

suvarna gold
- Advertisement -

Related news

error: Content is protected !!