Sunday, May 5, 2024
spot_imgspot_img
spot_imgspot_img

ಬಂಟ್ವಾಳ: ಒಂಟಿಯಾಗಿ ಮನೆಯಲ್ಲಿದ್ದ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ, ಜೀವ ಬೆದರಿಕೆ ಹಾಕಿ ಚಿನ್ನಾಭರಣ ದರೋಡೆ..!

- Advertisement -G L Acharya panikkar
- Advertisement -

ಬಂಟ್ವಾಳ: ರಾತ್ರಿ ವೇಳೆ ಒಂಟಿಯಾಗಿ ಮನೆಯಲ್ಲಿದ್ದ ಅಜ್ಜಿಯ ಬಾಯಿಗೆ ಬಟ್ಟೆ ತುರುಕಿ ಜೀವ ಬೆದರಿಕೆ ಹಾಕಿ ಕಿವಿಯಲ್ಲಿದ್ದ ಚಿನ್ನ ಹಾಗೂ ಗೊದ್ರೇಜ್ ನಲ್ಲಿ ಇರಿಸಲಾಗಿದ್ದ ಚಿನ್ನವನ್ನು ದರೋಡೆ ಮಾಡಿರುವ ಘಟನೆ ಮಾ.26 ರ ಶನಿವಾರ ರಾತ್ರಿ ವೇಳೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಗ್ರಾಮದಲ್ಲಿ ನಡೆದಿದೆ.

ಮುತ್ತು ಅಜ್ಜಿಯ ಕಿವಿಯಲ್ಲಿದ್ದ ಬೆಂಡೋಲೆ, ಗೊದ್ರೆಜ್ ನಲ್ಲಿರಿಸಿದ್ದ ಕರಿಮಣಿ ಸರ, ಹಾಗೂ ಉಂಗುರ ಒಟ್ಟು 4.30 ಪವನ್ ಚಿನ್ನವನ್ನು ದರೋಡೆ ಮಾಡಲಾಗಿದೆ. ಮಣಿನಾಲ್ಕೂರು ಗ್ರಾಮದ ಟಾಂದಲ್ಕೆ ನಿವಾಸಿ ಸೇಸಪ್ಪ ನಾಯ್ಕ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ.

vtv vitla
vtv vitla

ಸೇಸಪ್ಪ ನಾಯ್ಕ್ ಅವರ ಮನೆಯಲ್ಲಿ ತಾಯಿ ಮುತ್ತು ಪತ್ನಿ ಪ್ರೇಮಾಒಟ್ಟು ಮೂರು ಮಂದಿ ಮಾತ್ರ ಇದ್ದು, ಗಂಡ ಹೆಂಡತಿ ಇಬ್ಬರು ಶನಿವಾರ ರಾತ್ರಿ ಸುಮಾರು 8.30ರ ವೇಳೆ ತಾಯಿ ಮುತ್ತು ಅವರನ್ನು ಮನೆಯಲ್ಲಿ ನಿಲ್ಲಿಸಿ ಮನೆಗೆ ಬೀಗ ಹಾಕಿ ಅಲ್ಲಿಯೇ ಹತ್ತಿರದ ಬಾಚಕೆರೆ ಎಂಬಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಅಂಗವಾಗಿ ಶಿವದೂತ ಗುಳಿಗೆ ನಾಟಕ ಪ್ರದರ್ಶನ ನೋಡಲು ಹೋಗಿದ್ದರು.

ನಾಟಕ ಮುಗಿಸಿ 2.30 ವೇಳೆ ವಾಪಾಸು ಮನೆಗೆ ಬರುವಾಗ ಮನೆಯ ಬೀಗ ಮುರಿದು ಬಾಗಿಲು ಅರ್ಧ ತೆರೆದ ಸ್ಥಿತಿಯಲ್ಲಿ ಇದ್ದು, ಮನೆಯೊಳಗೆ ಹೋಗಿ ತಾಯಿಯನ್ನು ವಿಚಾರಿಸಿದಾಗ ಯಾರೋ ಅಪರಿಚಿತ ವ್ಯಕ್ತಿ ಮನೆಯೊಳಗೆ ಬಂದು ಮಲಗಿದ್ದ ಮುತ್ತು ಅಜ್ಜಿಯ ಬಾಯಿಗೆ ಬಟ್ಟೆ ತುರುಕಿ ಬೊಬ್ಬೆ ಹಾಕಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಚಿನ್ನವನ್ನು ದರೋಡೆ ಮಾಡಿರುವ ಪ್ರಕರಣದ ಬಗ್ಗೆ ತಿಳಿದಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಡಿ.ವೈ.ಎಸ್.ಪಿ.ಪ್ರತಾಪ್ ಥೋರಾಟ್, ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಹರೀಶ್, ಅಪರಾಧ ವಿಭಾಗದ ಎಸ್ಐ.ಸಂಜೀವ, ಬೆರಳಚ್ಚು ತಜ್ಞ ರು, ಶ್ವಾನ ದಳದವರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದರೋಡೆ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಶೀಘ್ರವಾಗಿ ಆರೋಪಿಯ ಬಂಧನ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ.

vtv vitla
vtv vitla
- Advertisement -

Related news

error: Content is protected !!