Friday, August 7, 2026
spot_imgspot_img
spot_imgspot_img

ಬಂಟ್ವಾಳ: ಕಲ್ಲಡ್ಕ ವಲಯ ಬಂಟರ ಸಂಘದ ವಾರ್ಷಿಕ ಮಹಾಸಭೆ

- Advertisement -
- Advertisement -

ಬಂಟ್ವಾಳ : ಬಂಟ್ವಾಳ ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಯವರ ಉಪಸ್ಥಿತಿಯಲ್ಲಿ ಕಲ್ಲಡ್ಕ ವಲಯ ಬಂಟರ ಸಂಘದ ಮಹಾಭೆಯು ವಲಯಾಧ್ಯಕ್ಷ ಪದ್ಮನಾಭ ರೈ ರವರ ಮನೆಯಲ್ಲಿ ತಾರೀಕು 15/5/22 ರಂದು ಜರಗಿತು.

ಕಲ್ಲಡ್ಕ ವಲಯದ ವ್ಯಾಪ್ತಿಯ ಶಂಭೂರು, ಅಮ್ಟೂರು, ಗೋಳ್ತಮಜಲು, ಪಾಣೆ ಮಂಗಳೂರು , ಬಾಳ್ತಿಲ,ನರಿಕೊಂಬು ಗ್ರಾಮಗಳ ಗ್ರಾಮ ಸಮಿತಿಯ ಅಧ್ಯಕ್ಷರ ಮತ್ತು ಪದಾಧಿಕಾರಿಗಳ, ಸದಸ್ಯರ ಮತ್ತು ಯುವ ಬಂಟರ ಸಂಘದ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಕಲ್ಲಡ್ಕ ವಲಯದ ಅಧ್ಯಕ್ಷರಾಗಿ ಪದ್ಮನಾಭ ರೈ ಯವರನ್ನು ಪುನರಾಯ್ಕೆ ಮಾಡಲಾಯಿತು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಶೆಟ್ಟಿ ಗೋಳ್ತಮಜಲು, ಕೋಶಾಧಿಕಾರಿಯಾಗಿ ಸುರೇಶ್ ಶೆಟ್ಟಿ ಕಾಂದಿಲ, ಯುವ ಬಂಟರ ಸಂಘದ ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ನೀನಾ ರೈ , ಹಾಗೂ ಗ್ರಾಮ ಸಮಿತಿಯ ಅಧ್ಯಕ್ಷರನ್ನಾಗಿ ವೀರಕಂಭ – ಸಂದೀಪ್ ಶೆಟ್ಟಿ, ಗೋಳ್ತಮಜಲು- ಮಹೇಶ್ ಶೆಟ್ಟಿ, ಪಾಣೆಮಂಗಳೂರು – ಐತಪ್ಪ ಶೆಟ್ಟಿ, ನರಿಕೊಂಬು – ಪ್ರೇಮನಾಥ ಶೆಟ್ಟಿ, ಬಾಳ್ತಿಲ – ರಾಮಣ್ಣ ಶೆಟ್ಟಿ, ಅಮ್ಟೂರು- ಪ್ರಭಾಕರ ಶೆಟ್ಟಿ ಯವರನ್ನು ಆಯ್ಕೆ ಮಾಡಲಾಯಿತು.

ಬಂಟ್ವಾಳ ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರನ್ನು ಕಲ್ಲಡ್ಕ ವಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಲಯ ಅಧ್ಯಕ್ಷ ಪದ್ಮನಾಭ ರೈ ಸ್ವಾಗತಿಸಿ ದ ಕಾರ್ಯಕ್ರಮದಲ್ಲಿ ಸುನಾದ್ ರಾಜ್ ಶೆಟ್ಟಿ ವರದಿ ವಾಚಿಸಿದರು. ನಾಗೇಶ್ ಶೆಟ್ಟಿ ಬೊಂಡಾಲ ನಿರೂಪಿಸಿ ಸುರೇಶ್ ಶೆಟ್ಟಿ ಕಾಂದೀಲ ವಂದಿಸಿದರು.

- Advertisement -

Related news

error: Content is protected !!