Saturday, June 28, 2025
spot_imgspot_img
spot_imgspot_img

ಬಂಟ್ವಾಳ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ಗಂಭೀರ

- Advertisement -
- Advertisement -

ಬಂಟ್ವಾಳ: ಬಿಸಿರೋಡು ಪುಂಜಾಲಕಟ್ಟೆ ರಾಜ್ಯ ಹೆದ್ದಾರಿಯ ಬಡಗುಂಡಿ ಎಂಬಲ್ಲಿ ಎರಡು ಕಾರುಗಳ ನಡುವೆ ಜುಲೈ 1 ರ ಮಧ್ಯ ರಾತ್ರಿ ಸುಮಾರು 12 ಗಂಟೆ ವೇಳೆ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು ಖಾಸಗಿ ‌ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ನಯನಾಡು ನಿವಾಸಿ ಬ್ಯಾಪ್ಟಿಸ್ ಲೊಬೊ ಅವರ ಮಗ ಚಾಲಕ ರಾಕ್‌ಲಿನ್ ಲೋಬೊ ( 26) ಗಂಭೀರ ಸ್ವರೂಪದ ಗಾಯಗೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾವೂರ ಸಮೀಪದ ಬಡಗುಂಡಿ ಎಂಬಲ್ಲಿ ಮಂಗಳೂರಿನಿಂದ ಪುಂಜಾಲಕಟ್ಟೆ ನಯನಾಡು ಮನೆಗೆ ರಿಟ್ಸ್ ಕಾರಿನಲ್ಲಿ ಹೋಗುತ್ತಿದ್ದ ರಾಕ್‌ಲಿನ್‌ನ ಕಾರು ಬಡಗುಂಡಿಯಲ್ಲಿ ಅಪಘಾತ ಸಂಭವಿಸಿದೆ.

ವಾಮದಪದವು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅಲ್ಲಿಂದ ವಾಪಾಸು ಮಂಜೇಶ್ವರಕ್ಕೆ ಹೋಗುತ್ತಿದ್ದ ವೇಳೆ ಎರ್ಟಿಗಾ ಕಾರು ಹಾಗೂ ರಿಟ್ಸ್ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಎರ್ಟಿಗಾ ಕಾರಿನಲ್ಲಿ ಸುಮಾರು 12 ಮಂದಿ ಪ್ರಯಾಣಿಕರಿದ್ದು ಎಲ್ಲರಿಗೂ ಗಾಯವಾಗಿದೆ ಎಂದು ಹೇಳಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಾಗಿದೆ. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಮೂರ್ತಿ ಅವರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!