Friday, March 29, 2024
spot_imgspot_img
spot_imgspot_img

ಬಂಟ್ವಾಳ : ಖತರ್ನಾಕ್ ಕಳ್ಳರನ್ನು ಹೆಡೆಮುರಿಕಟ್ಟಿದ ಪೊಲೀಸರು

- Advertisement -G L Acharya panikkar
- Advertisement -

ಬಂಟ್ವಾಳ : ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿ ಎಂಬಲ್ಲಿ ನಿರ್ಮಾಣದ ಹಂತದ ಕಟ್ಟಡದ ಬಳಿ ಹಾಕಿದ್ದ 97,900/- ರೂಪಾಯಿ ಮೌಲ್ಯದ 89 ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ 90,000/- ರೂಪಾಯಿ ಮೌಲ್ಯದ 401 ಕೆ.ಜಿ. ಅಡಿಕೆ ಕಳವು ಮಾಡಿದ ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ತುಂಬೆ ಗ್ರಾಮದ ಬೊಳ್ಳಾರಿ ಮನೆಯ ಮೊಹಮ್ಮದ್ ಅನ್ಸಾಫ್ (34 ವ), ಮದಕ ಮನೆಯ ನವಾಜ್ (24 ವ) ಎನ್ನಲಾಗಿದೆ.

ಬಂಧಿತ ಆರೋಪಿಗಳಿಂದ ಕಳವು ಮಾಡಿದ 97,900/- ರೂಪಾಯಿ ಮೌಲ್ಯದ 89 ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ KA-21-A-7618 ನೇ ನೊಂದಣಿ ಸಂಖ್ಯೆಯ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ ಆರೋಪಿಗಳು ದಿನಾಂಕ: 12.02.2023 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ 21 ಗೋಣಿ ಚೀಲಗಳಲ್ಲಿ 90,000/- ರೂಪಾಯಿ ಮೌಲ್ಯದ 401 ಕೆ.ಜಿ. ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ.

ಪತ್ತೆ ಕಾರ್ಯದಲ್ಲಿ ಪೊಲೀಸ್ ಅಧೀಕ್ಷಕರು ದ.ಕ. ಜಿಲ್ಲೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದ.ಕ. ಜಿಲ್ಲೆ ಮಂಗಳೂರು ರವರ ಮಾರ್ಗದರ್ಶನದಂತೆ, ಪೊಲೀಸ್ ಉಪಾಧೀಕ್ಷಕರು ಪ್ರತಾಪ್ ಸಿಂಗ್ ಥೋರಾಟ್ ಮತ್ತು ಪೊಲೀಸ್ ನಿರೀಕ್ಷಕ ವಿವೇಕಾನಂದರವರ ನಿರ್ದೇಶನದಂತೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅಪರಾಧ ಸಿಬ್ಬಂದಿಯವರಾದ ಎಎಸ್ಐ ನಾರಾಯಣ, ಜಿನ್ನಪ್ಪ ಗೌಡ, ಹೆಚ್ ಸಿ, ಇರ್ಷಾದ್ ಪಿ, ರಾಜೇಶ್, ಗಣೇಶ್, ಮನೋಹರ, ಪಿಸಿ ಪ್ರವೀಣ್, ಮೋಹನ ಭಾಗವಹಿಸಿದ್ದರು.

- Advertisement -

Related news

error: Content is protected !!