Saturday, July 25, 2026
spot_imgspot_img
spot_imgspot_img

ಶಾಲಾ ಬಸ್ ಮೇಲೆ ಮರ ಬಿದ್ದು ವಿದ್ಯಾರ್ಥಿನಿ ಮೃತ್ಯು ಪ್ರಕರಣ-ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಬಂಟ್ವಾಳ : ಮಾಣಿ ಸಮೀಪದ ಕಲ್ಲೆಟ್ಟಿ ಎಂಬಲ್ಲಿ ಜು.22ರಂದು ಮರ ಬಿದ್ದು ದುರಂತಕ್ಕೀಡಾದ ಶಾಲಾ ವಾಹನದ ದಾಖಲೆ ಪತ್ರ ಸರಿ ಇಲ್ಲದ ಕಾರಣಕ್ಕಾಗಿ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಆಡಳಿತ ಮಂಡಳಿಯ ಮುಖ್ಯಸ್ಥರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜು.22 ರಂದು ಸಂಜೆ ಬರಿಮಾರ್ – ಕಲ್ಲೆಟ್ಟಿ ಎಂಬಲ್ಲಿ ಶಾಲಾ ವಾಹನದ ಮೇಲೆ ಮರ ಬಿದ್ದು ವಾಹನದಲ್ಲಿದ್ದ ವಿದ್ಯಾರ್ಥಿನಿ ಮೃತಪಟ್ಟು ಇತರ ಕೆಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ಶಾಲಾ ವಾಹನದ ದಾಖಲೆ ಪತ್ರಗಳ ಮಾನ್ಯತೆಯ ಬಗ್ಗೆ ವರದಿ ಪಡೆದಿದ್ದರು. ಘಟನಾ ಸಮಯದಲ್ಲಿ ವಾಹನದ ವಿಮಾ ಪತ್ರ ಹಾಗೂ ಅರ್ಹತಾ ಪತ್ರ ಚಾಲ್ತಿಯಲ್ಲಿ ಇಲ್ಲದೆ ಇರುವುದು ದೃಢಪಟ್ಟಿದೆ. ಅಲ್ಲದೆ ವಾಹನವನ್ನು ಶ್ರೀರಾಮ ವಿದ್ಯಾಕೇಂದ್ರದ ಹೆಸರಿನಲ್ಲಿ ನೋಂದಾಯಿಸಿದೆ, ಬೇರೆ ಟ್ರಸ್ಟ್ ವೊಂದರ ಮಾಲಕತ್ವದಲ್ಲಿರುವುದಾಗಿದೆ.

ಅಗತ್ಯ ದಾಖಲೆ ಪತ್ರಗಳನ್ನು ಹೊಂದದೇ ವಿದ್ಯಾರ್ಥಿಗಳ ಸುರಕ್ಷತೆಗೆ ಅಪಾಯವನ್ನುಂಟು ಮಾಡುವಂತಹ ವಾಹನ ವನ್ನು ಸಾರ್ವಜನಿಕ ಸ್ಥಳದಲ್ಲಿ ಬೇಜವಾಬ್ದಾರಿಯಿಂದ ಚಲಾಯಿಸಲು ಕಾರಣರಾದ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ಆಡಳಿತ ಮಂಡಳಿಯ ಮುಖ್ಯಸ್ಥ ಹಾಗೂ ಇತರರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 109/2026, 0 125 2 2 2, 0 196, 192(1) ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!