Thursday, May 2, 2024
spot_imgspot_img
spot_imgspot_img

ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗ್ರಾಮೀಣ ಕಲಾಸಾಧಕಿ ಸವಿತಾ ಕೋಡಂದೂರುರವರಿಗೆ ಸನ್ಮಾನ

- Advertisement -G L Acharya panikkar
- Advertisement -

ಕೃಷಿ ಜೊತೆ ಸಂಗೀತ ಶಾಸ್ತಿçÃಯ, ಸುಗಮ ಸಂಗೀತ, ಸ್ಯಾಕ್ಸೋಫೋನ್ ಜೊತೆ ಗಾನ ವೈಭವ, ಸಪ್ತ ಮಾತೃಕೆಯರ ಗೀತ ಗಾಯನ, ಪುಟಾಣಿ ಮಕ್ಕಳಿಗೆ ಸಂಗೀತ ಶಾಲೆ, ಕುಮಾರ್ ಪೆರ್ನಾಜೆಯವರ ಸ್ವರ ಸಿಂಚನ ಕಲಾ ತಂಡದ ಮುಖ್ಯ ಹಾಡುಗಾರ್ತಿ ಬಹುಮುಖ ಗ್ರಾಮೀಣ ಪ್ರತಿಭೆ ಸವಿತಾ ಕೋಡಂದೂರು

ಸವಿತಾ ಕೊಡಂದೂರು ನೂಜಯ ವೇ ಮೂ ಕೇಶವ ಭಟ್ ಮತ್ತು ದೇವಕಿ ದಂಪತಿಗಳ ಪುತ್ರಿ, ವಿದ್ವಾನ್ ಬಳ್ಳಪದವು ಯೋಗೀಶ್ ಶರ್ಮಾರ ಶಿಷ್ಯೆ. ಸಂಗೀತ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ ಇವರು ವಿಟ್ಲ ಸುಪ್ರಜಿತ್ ಐ ಟಿ ಐ. ಕಾಲೇಜು ಮಾಜಿ ಪ್ರಾಂಶುಪಾಲ ಕೋಡಂದೂರು ರಘುರಾಮ್ ಶಾಸ್ತಿçಯವರನ್ನು ವಿವಾಹವಾಗಿ ಸುಖೀ ಸಂಸಾರ ನಡೆಸುತ್ತಿದ್ದಾರೆ.

ವಿಟ್ಲ ಪಡಿಬಾಗಿಲಿನಲ್ಲಿ ಸ್ವರ ಸಿಂಚನ ಸಂಗೀತ ಶಾಲೆಯನ್ನು ಸ್ಥಾಪಿಸಿ ಹಲವಾರು ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದು, ಇಲ್ಲಿನ ಸಂಗೀತ ವಿದ್ಯಾರ್ಥಿಗಳು ಶೇ. 100 ಫಲಿತಾಂಶ ಗಳಿಸುಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹಲವಾರು ಶಾಲೆಗಳಲ್ಲಿ ಕಾರ್ಯಗಾರವನ್ನು ನೀಡುತ್ತಾ ಬಂದಿರುವ ಇವರು ಸಂಗೀತ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಕರ್ನಾಟಕ ಸಂಗೀತ ಪರೀಕ್ಷೆಯ ಪರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಸಾಧನೆಯ ಮಕುಟಕ್ಕೆ ಇನ್ನೊಂದು ಗರಿ ಎಂಬ0ತೆ ಬಂಟ್ವಾಳ ತಾಲೂಕು ೨೨ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.

- Advertisement -

Related news

error: Content is protected !!