Monday, August 3, 2026
spot_imgspot_img
spot_imgspot_img

ಬಂಟ್ವಾಳ: ನಂದಾವರ ಸಮೀಪದ ಸೇತುವೆಯಿಂದ ಹಾರಿ ವ್ಯಕ್ತಿ ಆತ್ಮಹತ್ಯೆ..!

- Advertisement -
- Advertisement -
suvarna gold

ಬಂಟ್ವಾಳ: ವ್ಯಕ್ತಿಯೋರ್ವರು ಸೇತುವೆಯಿಂದ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ. ಮೃತರನ್ನು ಸಜಿಪಮುನ್ನೂರು ಗ್ರಾಮದ ಮಡಿವಾಳಪಡ್ಪು ನಿವಾಸಿ ದೇವಪ್ಪ ಮಡಿವಾಳ (60) ಎನ್ನಲಾಗಿದೆ.

ಶನಿವಾರ ಪಾಣೆಮಂಗಳೂರು ಪೇಟೆಗೆ ಬಂದವರು ಅಲ್ಲಿಂದ ಆಟೊದಲ್ಲಿ ನಂದಾವರ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿರುವ ಕಿರುಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೂಡಿನಬಳಿಯ ಈಜುಗಾರರು ಮೃತದೇಹವನ್ನು ಮೇಲಕ್ಕೆತ್ತಲು ಸಹಕರಿಸಿದರು. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!