Sunday, May 19, 2024
spot_imgspot_img
spot_imgspot_img

ಬಂಟ್ವಾಳ : ಪರವಾನಿಗೆ ಇಲ್ಲದೆ ಮದ್ಯ ಮಾರಾಟ; ಆರೋಪಿ ಪೊಲೀಸ್ ವಶಕ್ಕೆ

- Advertisement -G L Acharya panikkar
- Advertisement -
vtv vitla

ಬಂಟ್ವಾಳ : ಪರವಾನಿಗೆ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಟ್ವಾಳ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಬಂಟ್ವಾಳ ಕಳ್ಳಿಗೆ ಗ್ರಾಮ ಕಲ್ಪನೆ ಮನೆ, ಮೆಲ್ವಿನ್ ರೋಡ್ರಿಗಸ್ ಎನ್ನಲಾಗಿದೆ.

ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ರಾಮಕೃಷ್ಣರವರು ಸಿಬ್ಬಂದಿಗಳೊಂದಿಗೆ ರಾತ್ರಿ ಕರ್ತವ್ಯದಲ್ಲಿ ವೇಳೆ ನಲ್ಕೆಮಾರ್ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಕೈಕಂಬ ಕಡೆಯಿಂದ ಬರುತ್ತಿದ್ದ ಸ್ಕೂಟರ್‌ನ್ನು ನಿಲ್ಲಿಸಲು ಸೂಚಿಸಿದ್ದಾರೆ. ಆರೋಪಿಯು ಸ್ಕೂಟರ್‌ನ್ನು ನಿಲ್ಲಿಸದೇ ಮಂಗ್ಲಿಮಾರ್ ದೈವಸ್ಥಾನದ ಕಡೆಗೆ ಚಲಾಯಿಸಲು ಯತ್ನಿಸಿದ್ದು, ಪೊಲೀಸರು ಆರೋಪಿಯನ್ನು ತಡೆದು ನಿಲ್ಲಿಸಿ ವಾಹನ ತಪಾಸಣೆ ನಡೆಸಿದ್ದಾರೆ.

ಈ ವೇಳೆ ಸ್ಕೂಟರ್‌ನ ಪೂಟ್ ರೆಸ್ಟ್ ನಲ್ಲಿರುವ ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲ ಕಂಡು ಬಂದಿದ್ದು, ಪರಿಶೀಲಿಸಿದಾಗ ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ 90 ಎಂ.ಎಲ್ ಪರಿಮಾಣದ ಮೈಸೂರು ಲ್ಯಾನ್ಸರ್ ವಿಸ್ಕಿ ಹೆಸರಿನ 48 ಮದ್ಯದ ಸ್ಯಾಚೇಟ್ ಗಳು ಹಾಗೂ ಇನ್ನೊಂದು ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ 90 ಎಂ.ಎಲ್ ಪರಿಮಾಣದ ಓರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ ಹೆಸರಿನ 48 ಮದ್ಯದ ಸ್ಯಾಚೇಟ್ ಗಳು ಕಂಡು ಬಂದಿದೆ.

ಈತನು ಬಿ.ಸಿ.ರೋಡ್ ಕೈಕಂಬ ಎಂಬಲ್ಲಿ 5 ಸ್ಟಾರ್ ವೈನ್ಸ್ ಶಾಪಿನಿಂದ ಚಿಲ್ಲರೆಯಾಗಿ ಖರೀದಿಸಿಕೊಂಡು ಬಂದಿದ್ದು, ಮದ್ಯದ ಸ್ಯಾಚೇಟ್ ಗಳನ್ನು ಪರವಾನಿಗೆ ಮತ್ತು ರಶೀದಿ ಹೊಂದದೇ ಸಾಗಾಟ ಮತ್ತು ಮಾರಾಟ ಮಾಡುವುದು ಕಂಡುಬಂದಿದೆ. ಆರೋಪಿಯಿಂದ ಒಟ್ಟು 3,372.48 ರೂಪಾಯಿ ಮೌಲ್ಯದ ಮದ್ಯದ ಸ್ಯಾಚೇಟ್‌ಗಳು, ಸುಮಾರು 45,000/- ರೂಪಾಯಿ ಮೌಲ್ಯದ KA-19-HL-2504 ಸ್ಕೂಟರನ್ನು ಸ್ವಾಧೀನಪಡಿಸಿಕೊಂಡ ಪೊಲೀಸರು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!