Thursday, April 25, 2024
spot_imgspot_img
spot_imgspot_img

ಬಂಟ್ವಾಳ: ಮನೆ ನಿರ್ಮಾಣದ ಪರವಾನಿಗೆ ಪಡೆದು ಪ್ರಾರ್ಥನಾ ಮಂದಿರ ನಿರ್ಮಾಣದ ಆರೋಪ; ಸೂಕ್ತ ಕ್ರಮಕ್ಕೆ ವಿ.ಹಿಂ.ಪ ಭಜರಂಗದಳ ವಿಟ್ಲ ಪ್ರಖಂಡ ಆಗ್ರಹ!

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla

ಬಂಟ್ವಾಳ: ನರಿಕೊಂಬು ಗ್ರಾಮಪಂಚಾಯತ್ ನಿಂದ ಮನೆ ನಿರ್ಮಾಣ ಮಾಡುವುದಾಗಿ ಪರವಾನಿಗೆ ಪಡೆದು ಬಳಿಕ ಪ್ರಾರ್ಥನಾ ಮಂದಿರ ನಿರ್ಮಾಣ ಮಾಡಲು ಮುಂದಾಗಿರುವ ಆರೋಪಗಳು ಬಂದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ವಿಟ್ಲ ಪ್ರಖಂಡ ದ ವತಿಯಿಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

vtv vitla
vtv vitla

ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವರು ಜಮೀನು ಖರೀದಿಸಿ ಬಳಿಕ ಮನೆ ನಿರ್ಮಾಣಕ್ಕಾಗಿ ಗ್ರಾ.ಪಂ.ನಿಂದ ಪರವಾನಗಿ ಪಡೆದುಕೊಂಡಿದ್ದರು. ಆದರೆ ಮನೆ ನಿರ್ಮಾಣ ವಾಗಬೇಕಿದ್ದ ಜಾಗದಲ್ಲಿ ಪ್ರಾರ್ಥನಾ ಮಂದಿರ ನಿರ್ಮಾಣ ಮಾಡಲಾಗುತ್ತಿದೆ ಎಂಬ ಬಗ್ಗೆ ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ವಿಟ್ಲ ಪ್ರಖಂಡದ ಪ್ರಮುಖರು ಸ್ಥಳಕ್ಕೆ ನೀಡಿದ್ದಾರೆ.

ಈ ವೇಳೆ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದಾಗ ಇದು ಮನೆಯಂತಿರದೆ, ಪ್ರಾರ್ಥನಾ ಮಂದಿರದ ರೂಪದಲ್ಲಿ ಇರುವುದರಿಂದ ಇದರ ಪರವಾನಿಗೆಯನ್ನು ರದ್ದು ಮಾಡುವಂತೆ ಸ್ಥಳೀಯ ಗ್ರಾ.ಪಂ.ಪಿಡಿಒ ಹಾಗೂ ಸ್ಥಳೀಯ ಜನಪ್ರಗತಿ ನಿಧಿಗಳನ್ನು ಸ್ಥಳಕ್ಕೆ ಕರೆಸಿ ಆಗ್ರಹಿಸಿದ್ದಾರೆ ಎಂದು ಸಂಘಟನೆಯ ಪ್ರಮುಖ ಲೋಹಿತ್ ಪಣೋಲಿಬೈಲು, ಹಾಗೂ ಸಚಿನ್ ಮೆಲ್ಕಾರ್ ತಿಳಿಸಿದ್ದಾರೆ.

vtv vitla
- Advertisement -

Related news

error: Content is protected !!